ಧಾರವಾಡ : ಯುವತಿಯರ ಸಾವಿಗೆ ಬಿಗ್ ಟ್ವಿಸ್ಟ್ – ವೈಯಕ್ತಿಕ ಲಾಭಕ್ಕೆ ಬಳಕೆ ?

Team Newsnap
1 Min Read

ಜನವರಿ 31 ರಂದು ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ‌ ಬಳಿ ನಡೆದಿದ್ದ ಅಪಘಾತದಲ್ಲಿ ರೇಖಾ, ಮೇಘನಾ ಎಂಬ ಇಬ್ಬರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಯುವತಿಯರು, ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಆಪ್ತ ಕಾರ್ಯದರ್ಶಿ ಮುಲ್ಲಾ ಜೊತೆ ಗೋವಾಗೆ ತೆರಳಿದ್ದರು.

ಮನೆಗೆ ವಾಪಸ್​ ಬರುವಾಗ ಅಪಘಾತ ಸಂಭವಿಸಿ ಇಬ್ಬರೂ ಯುವತಿಯರು ದುರಂತ ಸಾವು ಕಂಡರು.

ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಯ ಆಪ್ತ ಕಾರ್ಯದರ್ಶಿ ಮುಲ್ಲಾ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ವಿಷಯ ಇದೀಗ ಬಹಿರಂಗವಾಗಿದೆ.

ಮುಲ್ಲಾ ಕಿರುಕುಳ ನೀಡುತ್ತಿದ್ದ ವಿಷಯವನ್ನು ಮೇಘನಾ ತನ್ನ ಗೆಳೆತಿಯೊಂದಿಗೆ ಹಂಚಿಕೊಂಡಿದ್ದಳು. ಇದೀಗ ಈ ವಿಷಯ ಬಹಿರಂಗವಾಗಿದೆ.

ಡಿಸೆಂಬರ್ ತಿಂಗಳೇ ನಿನ್ನ ಕೆಲಸ ಕೊನೆ ಎಂದು ಮುನ್ನ ಹೇಳುತ್ತಿರುತ್ತಾನೆ. ಇದರಿಂದ ನನಗೆ ಆತಂಕವಾಗುತ್ತಿದೆ ಎಂದು ಮೇಘನಾ ನೋವು ತೋಡಿಕೊಂಡಿದ್ದರು.

ಆತಂಕವನ್ನೇ ವೈಯಕ್ತಿಕ ಲಾಭಕ್ಕೆ ಮುಲ್ಲಾ ಬಳಸಿಕೊಂಡಿರುಚ ಶಂಕೆ ವ್ಯಕ್ತಪವಾಗಿದೆ.

ಪ್ರಕರಣದ ತನಿಖೆಗೆ ಜನಜಾಗೃತಿ ಸಂಘಟನೆ ಆಗ್ರಹಿಸಿದೆ. ಕೆಲಸ ಮುಂದುವರೆಸಲು ಯುವತಿಯರಿಗೆ ಕಿರುಕುಳ ನೀಡಲಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ತನಿಖೆಗೆ ಜಯ ಕರ್ನಾಟಕ ಸಂಘಟನೆ ಕೂಡ ಆಗ್ರಹಿಸಿದೆ.

ಯುವತಿ ಆಪ್ತರೊಡನೆ ನಡೆಸಿದ್ದ ವಾಟ್ಸಾಪ್ ಚಾಟ್ ಇದೀಗ ಬಹಿರಂಗವಾಗಿದೆ. ಪೋಲೀಸ್ ತನಿಖೆ ಮುಂದುವರೆದಿದೆ.

Share This Article
Leave a comment