February 8, 2023

Newsnap Kannada

The World at your finger tips!

IT,raid,assets

IT shock for Minister Sriramulu's former MLA Suresh Babu's relatives ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರಿಗೆ ಐಟಿ ಶಾಕ್

ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರಿಗೆ ಐಟಿ ಶಾಕ್

Spread the love

ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು ಅವರು ಬೇನಾಮಿ ಹೆಸರಿನಲ್ಲಿ ರುವ ಕಾರ್ಖಾನೆಗಳನ್ನು ನಿರ್ವಹಿಸುತ್ತಿರುವ ಆಪ್ತರ ಮನೆ ಕಚೇರಿ ಮೇಲೆ ಶನಿವಾರ ಐಟಿ ದಾಳಿ ನಡೆದಿದೆ .

ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆ ಬೆಂಗಳೂರು, ಚೆನ್ನೈನ ಹದಿನೈದು ಅಧಿಕಾರಿಗಳಿಂದ‌ ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿ ದಾಳಿ ಮಾಡಲಾಗಿದೆ.‌ಊಟದ ವಿಚಾರಕ್ಕೆ ಜಗಳ – ತಾಯಿ,ಮಗನ ಆತ್ಮಹತ್ಯೆ

ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 310 ಮತ್ತು 510ಪ್ಲಾಟ್ ನಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಐಟಿ ಅಧಿಕಾರಿಗಳ ಕೈಗೆ ಮಹತ್ವದ ದಾಖಲೆ ದೊರೆತಿವೆಯಂತೆ.

ಸಚಿವ ಶ್ರೀರಾಮುಲು ಹಾಗೂ ಕೈಲಾಸ್ ವ್ಯಾಸ್ ಸೇರಿ ಹರಿ ಇಸ್ಪಾತ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಯ ಹಣದ ಮೂಲದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಮಾಜಿ ಶಾಸಕ ಸುರೇಶ್ ಬಾಬುಗೆ ಸೇರಿದ
ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್ , ಬಳ್ಳಾರಿಯ ವೆಂಕಟೇಶ್ವರ,
ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್ ಗೆ ಸೇರಿದ ದಾಖಲೆ ಪರಿಶೀಲನೆ ನಡೆದಿದೆ.

ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಲಾಡ್ ಕುಟುಂಬದ ಪ್ಲಾಂಟ್ ಗಳನ್ನು ಲೀಜ್ ಮೇಲೆ ಕೈಲಾಸ್ ವ್ಯಾಸ್ ನಡೆಸುತ್ತಿದ್ದರು. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿಈ ದಾಳಿ ಮಾಡಿದೆ ಎನ್ನಲಾಗಿದೆ.

error: Content is protected !!