ಜೈಲು ಸೇರಿದ ‘ಸ್ಯಾಂಟ್ರೋ’

Team Newsnap
1 Min Read
Santro Ravi suicide attempt? Fluctuations in health - admitted to hospital ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನ? ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

ಸ್ಯಾಂಟ್ರೋ ರವಿಗೆ 15 ದಿನ ನ್ಯಾಯಾಂಗ ಬಂಧನ

ಮೈಸೂರು :

ಗುಜರಾತಿನಲ್ಲಿ ಬಂಧಿಸಿ ಕರೆತಂದಿರುವ ಸ್ಯಾಂಟ್ರೋ ರವಿ ಅಲಿಯಾಸ್ ಕೆ ಎಸ್ ಮಂಜುನಾಥ್‌ನನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಜೆಎಂಎಫ್​ಸಿ ಕೋರ್ಟ್ ಆದೇಶ ಹೊರಡಿಸಿದೆ.ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಆಪ್ತರಿಗೆ ಐಟಿ ಶಾಕ್

ಎರಡನೇ ಶನಿವಾರವಾದ ಇಂದು ನ್ಯಾಯಾಲಕ್ಕೆ ರಜೆ ಹಿನ್ನಲೆಯಲ್ಲಿ ಪೊಲೀಸರು ರವಿಯನ್ನು ವಿವಿ ಮೊಹಲ್ಲಾದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಬಿಗಿ ಭದ್ರತೆ ಮೂಲಕ ಮೈಸೂರಿನ ವಿಜಯನಗರ ಠಾಣೆಯಿಂದ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನ್ಯಾಯಾಧೀಶರ​ ನಿವಾಸಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಾಯಿತು.

ನ್ಯಾಯಾಧೀಶರ ಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಬ್ಬರು ಇನ್ಸ್​ಪೆಕ್ಟರ್, ಇಬ್ಬರು ಪಿಎಸ್ ಐಸೇರಿ 15 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Share This Article
Leave a comment