ಊಟದ ವಿಚಾರಕ್ಕೆ ಜಗಳ – ತಾಯಿ,ಮಗನ ಆತ್ಮಹತ್ಯೆ

Team Newsnap
1 Min Read

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದಿದೆ.

ಮೃತರನ್ನು ವಿಜಯಲಕ್ಷ್ಮಿ (50) ಹಾಗೂ ಹರ್ಷ (25) ಆತ್ಮಹತ್ಯೆ ಮಾಡಿಕೊಂಡವರು.ನಿಮಿಷಾಂಭ ದೇವಿಗೆ ಹರಕೆ ಹೊತ್ತ 22 ಗಂಟೆಗಳಲ್ಲೇ ಸ್ಯಾಂಟ್ರೋ ಬಂಧನ : ಅಲೋಕ್ ಕುಮಾರ್

ತಾಯಿ ವಿಜಯಲಕ್ಷ್ಮಿ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ತಾಯಿ ಮೃತಪಟ್ಟ ವಿಚಾರ ತಿಳಿದು ತೀವ್ರವಾಗಿ ಮನನೊಂದ ಹರ್ಷ ನಾನೇ ತಾಯಿಯ ಸಾವಿಗೆ ಕಾರಣನಾದೆ ಎಂದು ಭಾವಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆಗೆ ಸಂಬಂಧಿಸಿ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment