ಪ್ರವೀಣ್ ಹತ್ಯೆ ಕೇಸ್ ತನಿಖೆ ಕೇಂದ್ರದ ಎನ್ ಐಎಗೆ ಹಸ್ತಾಂತರ

Team Newsnap
1 Min Read

ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್​​ಐಎ)ಕ್ಕೆ ಹಸ್ತಾಂತರ ಮಾಡಿದೆ.

ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಘೋಷಣೆ ಮಾಡಿ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಡಿಜಿ, ಐಜಿ ಅವರೊಂದಿಗೆ ಚರ್ಚೆ ಮಾಡಿದ್ದೀನಿ. ಪ್ರಕರಣ ವ್ಯವಸ್ಥಿತ ಪ್ರಕರಣ ಹಾಗೂ ಅಂತರ್ ರಾಜ್ಯ ಸಂಬಂಧ ಇರೋ ಕಾರಣ ಎನ್​ಐಎ ಹಸ್ತಾಂತರ ಮಾಡಲು ಪತ್ರ ಬರೆಯಲು ಸೂಚನೆ ನೀಡಿದ್ದೇನೆ. ಪ್ರಕರಣ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು. ಇದನ್ನು ಓದಿ – ಸುರತ್ಕಲ್ ಫಾಜಿಲ್ ಹತ್ಯೆ: 14 ಮಂದಿ ಶಂಕಿತರು ವಶಕ್ಕೆ : ಮಂಗಳೂರು ಕಮೀಷನರ್

ಗಡಿಯಲ್ಲಿ ಸಿಸಿಟಿವಿ:

ಕೇರಳ ಗಡಿ ಪ್ರದೇಶದಲ್ಲಿ ಸಂಪೂರ್ಣವಾಗಿ ಚೇಕ್​ ಪೋಸ್ಟ್​ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು. ಪ್ರಮುಖ ಸಂಪರ್ಕ ಸ್ಥಳಗಳು ಹಾಗೂ ವಿಶೇಷವಾಗಿ ಸೂಷ್ಮ ಪ್ರದೇಶಗಳಲ್ಲಿ ಪೊಲೀಸ್​ ಕ್ಯಾಂಪ್​​ಗಳನ್ನು ಹಾಕುವುದು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಕೆಎಸ್​ಆರ್​ಫಿ ಇನ್ನೊಂದು ಬೆಟಾಲಿಯನ್​​ಅನ್ನು ದಕ್ಷಿಣ ಕನ್ನಡಕ್ಕೆ ಶಿಫ್ಟ್​ ಮಾಡುವುದು ಸೇರಿದಂತೆ ರಾತ್ರಿ ಗಸ್ತನ್ನು ಹೆಚ್ಚು ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ವಿವರಣೆ ನೀಡಿದರು.

Share This Article
Leave a comment