ರೋಹಿಣಿ ಸಿಂಧೂರಿ ವಿರುದ್ದ ನಾಳೆ ವಿಚಾರಣೆ – ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚನೆ

Team Newsnap
1 Min Read

ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದ ವೇಳೆ ನಡೆಸಿರುವ ಹಲವು ಅಕ್ರಮಗಳ ಕುರಿತು ನಾಳೆ ಬೆಂಗಳೂರಿನಲ್ಲಿ ವಿಚಾರಣೆ ನಡೆಯಲಿದೆ.

ವಿಧಾನಸೌಧದಲ್ಲಿ ರೋಹಿಣಿ ವಿಚಾರಣೆಗೆ ನಾಳೆ ಬೆಳಿಗ್ಗೆ 11 ಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡಲು ಸೂಚಿಸಲಾಗಿದೆ ಎಂದು ವಸತಿ ಇಲಾಖೆ ಪತ್ರ ಮೂಲಕ ಹೇಳಿದೆ.

ತನಿಖಾಧಿಕಾರಿಯಾಗಿ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಈ ಅಧಿಕಾರಿ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ರವಿಶಂಕರ್ ಅವರಿಗೆ ಸೂಚಿಸಲಾಗಿದೆ.

ನಾಳೆ ರವಿಶಂಕರ್ ಮುಂದೆ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಕೇಳಿಬಂದಿದ್ದ ಆರೋಪಗಳ ವಿಚಾರಣೆ ನೀಡಬೇಕಿದೆ.

ಆರೋಪಗಳು ಏನು ? :

  • 13 ರು ಬಟ್ಟೆ ಬ್ಯಾಗ್‌ 52 ರೂ.ಗಳಿಗೆ ಖರೀದಿ.
  • ಡಿಸಿ ನಿವಾಸದಲ್ಲಿ 5೦ ಲಕ್ಷ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ.
  • ಪಾರಂಪರಿಕ ಮಾರ್ಗಸೂಚಿ ಉಲ್ಲಂಘಿಸಿ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ
  • ಕೋವಿಡ್‌ನಿಂದ 969 ಮಂದಿ ಮೃತಪಟ್ಟರೂ 238 ಎಂದು ತಪ್ಪು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು
  • ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಕಾರಣ ರೋಹಿಣಿ ಕಾರಣ ಎಂಬ ಆರೋಪ
Share This Article
Leave a comment