November 27, 2021

Newsnap Kannada

The World at your finger tips!

3 ದಿನದಲ್ಲಿ ಜೆಡಿಎಸ್‌ಗೆ ಅಧಿಕೃತ ರಾಜೀನಾಮೆ: ಬಿಜೆಪಿಗೆ ಸೇರಲು ಸಂದೇಶ್‌ ಸಿದ್ದತೆ

Spread the love

ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಅಗತ್ಯ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಇನ್ನು 3ನೇ ದಿನದಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ತಿಳಿಸಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್ ಮೈಸೂರಿನ ಬಿಜೆಪಿ ಕಚೇರಿಯಲ್ಲೆ ಬಿಜೆಪಿ ಸೇರ್ಪಡೆಯಾಗುತ್ತೇನೆ. ಬಿಜೆಪಿ ಸೇರುವ ದಿನ ನಾನು ಯಾಕೆ ಜೆಡಿಎಸ್ ಬಿಟ್ಟೆ ಎಂಬುದನ್ನು ಸುದ್ದಿಗೋಷ್ಠಿ ಮಾಡಿ ವಿವರಿಸುತ್ತೇನೆ ಎಂದು ಹೇಳಿದರು.

ನನ್ನ ಅಗತ್ಯ ಎಚ್‌.ಡಿ.ಕುಮಾರಸ್ವಾಮಿ ಇದ್ದಂತಿಲ್ಲ. ಅವರ ಮಾತು, ನಡೆಯಲ್ಲಿ ಅದು ಗೊತ್ತಾಗುತ್ತಿದೆ. ಅಗತ್ಯವಿಲ್ಲದ ಕಡೆ ನಾನು ಯಾಕೆ ಇರಬೇಕು? ಎಂದು ಪ್ರಶ್ನೆ ಮಾಡಿದರು

ಕಳೆದ ಮೂರು ವರ್ಷಗಳಿಂದ ನಾನು ಮಾನಸಿಕವಾಗಿ ಬಿಜೆಪಿಯಲ್ಲೇ ಇದ್ದೇನೆ. ದೈಹಿಕವಾಗಿ ಅಷ್ಟೆ ಜೆಡಿಎಸ್‌ನಲ್ಲಿದ್ದೆ. ವಿಧಾನ ಪರಿಷತ್ ಒಳಗೂ ನಾನು ಬಿಜೆಪಿ ಪರವೇ ಬಿಲ್‌ಗಳಿಗೆ ಕೈ ಎತ್ತಿದ್ದೇನೆ. ಮೂರು ವರ್ಷದಿಂದ ನಾನು ಜೆಡಿಎಸ್ ನಾಯಕರ ಸಂರ್ಪಕದಲ್ಲಿ ಇಲ್ಲ. ನನಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಜೆಡಿಎಸ್‌ನಿಂದ ಶಾಸಕ ಜಿ.ಟಿ.ದೇವೇಗೌಡ ದೂರ ಸರಿಯುತ್ತಿರುವ ಬೆನ್ನಲ್ಲೇ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪಕ್ಷಕ್ಕೆ ಗುಡ್ ಬೈ ಹೇಳಲು ಮೂಹರ್ತ ನಿಗದಿ ಮಾಡಿದ್ದಾರೆ

error: Content is protected !!