ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಮೌಲ್ಯ 230 ಲಕ್ಷ ಕೋಟಿ ರು ಗೆ ಏರಿಕೆ

Team Newsnap
1 Min Read

ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಅಂತಹ ಡಿಜಿಟಲ್ ಹಣಕಾಸು
ವ್ಯವಹಾರಗಳ ಮಾರುಕಟ್ಟೆಗಳನ್ನು ಕಾನೂನು ಬದ್ಧಗೊಳಿಸಬೇಕಾ? ಬೇಡವಾ? ಅನ್ನೋದ್ರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಭಾರತದಲ್ಲಿ ಇನ್ನೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಸ್ಪಷ್ಟನೆಯೇ ಬಹುತೇಕವಾಗಿ ಸಿಕ್ಕಿಲ್ಲ.. ಆದ್ರೆ ವಿಶ್ವಾದ್ಯಂತ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಕಲ್ಪನೆಗೂ ಮೀರಿದ ಬೆಳವಣಿಗಗಳು ನಡೆದಿವೆ.

ಸೋಲಾನಾ, ಬಿನಾನ್ಸ್ ಕಾಯಿನ್, XRP, Cardano, ETHERIUM, ಬಿಟ್​ಕಾಯಿನ್, ಪೊಲ್ಕಾಡಾಟ್, ಡಾಜ್​ಕಾಯಿನ್, ಟೆಥರ್, USD ಕಾಯಿನ್​ ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತಿವೆ.

ಕಳೆದ ದಶಕದಲ್ಲಿ ಕ್ರಿಪ್ಟೋಕರೆನ್ಸಿ ಮೌಲ್ಯ ಒಟ್ಟಾರೆಯಾಗಿ 230 ಲಕ್ಷ ಕೋಟಿ ತುಲುಪಿದೆ. ಅಂದ್ರೆ ಬಹುತೇಕವಾಗಿ ಇಂದಿನ ಭಾರತದ ಎಕಾನಮಿಷ್ಟು ಕ್ರಿಪ್ಟೋ ಕರೆನ್ಸಿ ಮೌಲ್ಯ ತಲುಪಿದೆ.

ವಿಶೇಷ ಅಂದ್ರೆ ಕಳೆದ ದಶಕದಲ್ಲಿ ಒಟ್ಟಾರೆಯಾಗಿ ಕ್ರಿಪ್ಟೋ ಕರೆನ್ಸಿ
ಮೌಲ್ಯ ಸುಮಾರು 35-40 (0.5 ಟ್ರಿಲಿಯನ್ ಡಾಲರ್) ಲಕ್ಷ ಕೋಟಿ ರೂಪಾಯಿಗಷ್ಟೇ ತಲುಪಲು ಸಾಧ್ಯವಾಗಿತ್ತು.

ಕಳೆದ ನವೆಂಬರ್​​​​ ನಿಂದ ಈ ನವೆಂಬರ್​ ವರೆಗೆ ಅಂದ್ರೆ ಕೇವಲ 12 ತಿಂಗಳಲ್ಲಿ ಇದು ಆರು ಪಟ್ಟು ಬೆಳವಣಿಗೆ ಕಂಡಿದ್ದು ಬಹುತೇಕ 3 ಟ್ರಿಲಿಯನ್ ಡಾಲರ್​ ಅಂದ್ರೆ ಸುಮಾರು 230 -240 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಆದ್ರೆ ಕಳೆದ ಒಂದು ವರ್ಷದಲ್ಲಿ, ಕೊರೊನಾ ಅತಿ ಹೆಚ್ಚು ಇದ್ದಾಗಲೇ ಕ್ರಿಪ್ಟೋ ಮಾರುಕಟ್ಟೆ ನಿರೀಕ್ಷೆಗೂ ಮೀರಿ ಬೆಳವಣಿಗೆ ಆಗಿದ್ದು ವಿಶೇಷವಾಗಿದೆ.

Share This Article
Leave a comment