ವಾಣಿಜ್ಯ ಟ್ರಕ್‌ಗಳಲ್ಲಿ ನಿದ್ದೆ ಪತ್ತೆ ಹಚ್ಚುವ ಸಂವೇದಕ ಅಳವಡಿಸಿ: ಗಡ್ಕರಿ

Team Newsnap
1 Min Read

ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ವಾಣಿಜ್ಯ ಟ್ರಕ್‌ಗಳಲ್ಲಿ ನಿದ್ದೆ ಪತ್ತೆ ಹಚ್ಚುವ ಸಂವೇದಕ ಅಳವಡಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.


ಹಾಗೆಯೇ ವಾಣಿಜ್ಯ ಟ್ರಕ್‌ಗಳ ಚಾಲಕರಿಗೂ ಪೈಲಟ್‌ಗಳಿಗೆ ಇರುವಂತೆ ನಿರ್ದಿಷ್ಟ ಚಾಲನಾ ಸಮಯ ನಿಗದಿಗೊಳಿಸಬೇಕು ಎಂದು ತಮ್ಮ ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಜಿಲ್ಲಾ ರಸ್ತೆ ಸಮಿತಿ ಸಭೆ ನಿಯಮಿತವಾಗಿ ನಡೆಯಬೇಕು. ಇದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಹಾಗೆಯೇ ಜಿಲ್ಲಾಧಿಕಾರಿಗಳಿಗೂ ಈ ಕುರಿತು ಪತ್ರ ಬರೆಯಲಾಗುವುದು ಎಂದಿದ್ದಾರೆ.


ಚಾಲಕರು ಆಯಾಸವಾಗದೆ ವಾಹನ ಚಲಾಯಿಸಬೇಕಾದರೆ ವಿಮಾನದ ಪೈಲಟ್‌ಗಳಂತೆ ಅವರಿಗೂ ಸಮಯ ಗೊತ್ತುಪಡಿಸಿಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದಿದ್ದಾರೆ.


ಯುರೋಪಿಯನ್ ಮಾನದಂಡಗಳಿಗೆ ಸಮನಾದ ವಾಣಿಜ್ಯ ವಾಹನಗಳಲ್ಲಿ ಆನ್‌ಬೋರ್ಡ್ ಸ್ಲೀಪ್ ಡಿಟೆಕ್ಷನ್ ಸೆನ್ಸರ್ ಅಳವಡಿಸಬೇಕು. ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a comment