October 23, 2021

Newsnap Kannada

The World at your finger tips!

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಪೋಟ: ಹೊತ್ತಿ ಉರಿದ ಪ್ಲಾಟ್-ಇಬ್ಬರು ಸಜೀವ ದಹನ

Spread the love

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಯ ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ.ಈ ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಐದು ಜನರಿಗೆ ಗಾಯವಾಗಿದೆ.

ಸಿಲಿಂಡರ್ ಸ್ಫೋಟಕ್ಕೆ ಒಂದು ಫ್ಲಾಟ್ ಹೊತ್ತಿ ಉರಿದಿದೆ. ಬೆಂಗಳೂರು ನಗರದ ದೇವರಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ.

ಇಲ್ಲಿನ ಆಶ್ರೀತ ಅಪಾರ್ಟ್ಮೆಂಟ್​ನಲ್ಲಿ ಸಿಲಿಂಡರ್ ಸ್ಪೋಟ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುತ್ತಿದ್ದಾರೆ. ಬೇಗೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

error: Content is protected !!