ಮಂಡ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ – ಸದನದಲ್ಲಿ ಗುಡುಗಿದ ಶಾಸಕ ರವೀಂದ್ರ ಶ್ರೀಕಂಠಯ್ಯ

Team Newsnap
1 Min Read
Supporters of MP Sumalatha are highway brokers: Ravindra Srikanthaiah ಸಂಸದೆ ಸುಮಲತಾ ಬೆಂಬಲಿಗರೇ ಹೆದ್ದಾರಿ ದಲ್ಲಾಳಿಗಳು: ರವೀಂದ್ರ ಶ್ರೀಕಂಠಯ್ಯ

ಮಂಡ್ಯ ಜಿಲ್ಲೆಯ ಗಣಿಗಾರಿಕೆ ಅತಂತ್ರ ಸ್ಥಿತಿಯಲ್ಲಿದೆ. ಗಣಿಗಾರಿಕೆ ವಿಷಯದಲ್ಲಿ ರಾಜ್ಯಕ್ಕೊಂದು ಕಾನೂನು, ಮಂಡ್ಯಕ್ಕೆ ಒಂದು ಪ್ರತ್ಯೇಕ ಕಾನೂನು ಇದೆ. ಅದನ್ನು ಮೊದಲು ಸರಿಪಡಿಸಿ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಿಧಾನ ಸಭೆಯ ಅಧಿವೇಶನದಲ್ಲಿ ಗುಡುಗಿದರು.

ಮಂಡ್ಯ ಜಿಲ್ಲೆಯ ರೈತರು ಇಂದು ತೀವ್ರ ಕಷ್ಟದಲ್ಲಿ ಇದ್ದಾರೆ.‌ ಕಬ್ಬು ಬೆಳೆದರೂ ಅರೆಯಲು ಅವಕಾಶವಾಗುತ್ತಿಲ್ಲ. ಕಬ್ಬು ದರ ನಿಗದಿಯಾಗದೇ ಇರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಸರ್ಕಾರದ ವಿರುದ್ದ ಛಾಟಿ ಬೀಸಿದರು.

ಮಂಡ್ಯ ಜಿಲ್ಲೆಯಲ್ಲಿನ ನೀರಾವರಿಯ ಕಾಮಗಾರಿಗಳು ಗೊಂದಲ ಹಾಗೂ ನಿರ್ಲಕ್ಷ್ಯ ಕ್ಕೆ ಒಳಗಾಗಿವೆ. ಮಾಜಿ ಸಿಎಂ‌ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಮಂಜೂರು ಮಾಡಿದ್ದ ಎಲ್ಲಾ ಯೋಜನೆ ಗಳಿಗೆ ನಿರ್ಬಂಧ ಹೇರಿ, ಯೋಜನೆಗಳನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿದೆ. ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯವರಾಗಿ ಕಾಮಗಾರಿಗಳಿಗೆ ಹಂತ ಹಂತವಾಗಿ ಹಣ ಮಂಜೂರು ಮಾಡುವುದಾಗಿ ಹೇಳಿದ್ದರು. ಆದರೆ ಯಾವುದನ್ನೂ ಅನುಷ್ಠಾನಕ್ಕೆ ತರಲಿಲ್ಲ ಎಂದು ವಿಷಾದಿಸಿದರು.

ಗಣಿಗಾರಿಗೆಯಲ್ಲಿ ರಾಜಕೀಯ ಮಾಡಿ, ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಮಾಡಿರುವುದು, ಹಾಗೂ ಕಂದಾಯ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸಿಗದೇ ಸತಾಯಿಸುತ್ತಿರುವ ಸಂಗತಿಗಳನ್ನು ಸರ್ಕಾರದ ಗಮನಕ್ಕೆ ತಂದರು.

Share This Article
Leave a comment