November 16, 2024

Newsnap Kannada

The World at your finger tips!

iit madras

IIT, NIT, IIM – 5 ವರ್ಷಗಳಲ್ಲಿ 33,979 ವಿದ್ಯಾರ್ಥಿಗಳು ಡ್ರಾಪ್‌ಔಟ್, 98 ಆತ್ಮಹತ್ಯೆ!

Spread the love

ನವದೆಹಲಿ : ಕೇಂದ್ರೀಯ ವಿಶ್ವವಿದ್ಯಾಲಯಗಳು, IIT, NIT, IIM,I IITಗಳಲ್ಲಿ 2018ರಿಂದ 2023ರವರೆಗೆ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತಾಗಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (IISER), ಶಿಕ್ಷಣ ಸಚಿವಾಲಯ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ. ಅತ್ಯಧಿಕ ಸಂಖ್ಯೆಯ ಆತ್ಮಹತ್ಯೆಗಳು ಪ್ರೀಮಿಯರ್ ಇಂಜಿನಿಯರಿಂಗ್ ಸಂಸ್ಥೆಗಳಿಂದ ವರದಿಯಾಗಿದೆ.

iit iim

IITಗಳಿಂದ ಬರೋಬ್ಬರಿ 8,139 ವಿದ್ಯಾರ್ಥಿಗಳು ಡ್ರಾಪ್​ಔಟ್​ ಆಗಿದ್ದು. ಸಂಸತ್ತಿನ ಪ್ರತಿಕ್ರಿಯೆಯ ಪ್ರಕಾರ, ಡ್ರಾಪ್‌ಔಟ್​ಗಳು ಸ್ನಾತಕೋತ್ತರ ಅಥವಾ ಸಂಶೋಧನಾ ಕಾರ್ಯಕ್ರಮಗಳಿಂದ ಬಂದವರಾಗಿದ್ದಾರೆ. ರಾಹುಲ್ ಗಾಂಧಿ ಮದುವೆ ಯಾವಾಗ ? ಸೋನಿಯಾ ಉತ್ತರ ಸೋಜಿಗ !

2018ರಲ್ಲಿ, ಐಐಟಿಗಳು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ತಲಾ ಎಂಟು ವಿದ್ಯಾರ್ಥಿಗಳಂತೆ ಎಲ್ಲಾ ಸಂಸ್ಥೆಗಳಲ್ಲಿ ಒಟ್ಟು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ, NIT ಗಳ ಜತೆಗೆ IITಗಳು ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ಕಂಡಿವೆ. ಆ ವರ್ಷ ಒಟ್ಟು 19 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. 2020 ಮತ್ತು 2021ರ ಕೋವಿಡ್ ಸಾಂಕ್ರಾಮಿಕ ವರ್ಷಗಳಲ್ಲಿ ಕ್ಯಾಂಪಸ್‌ಗಳನ್ನು ಮುಚ್ಚಿದ್ದರಿಂದ ಮತ್ತು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರಿಂದ ಆತ್ಮಹತ್ಯೆ ದರಗಳು ಕಡಿಮೆಯಾಗಿದೆ. ಆದಾಗ್ಯೂ, 2022ರಲ್ಲಿ ಸಂಸ್ಥೆಗಳು ಪುನರಾರಂಭಗೊಂಡ ನಂತರ ಆತ್ಮಹತ್ಯೆ ಸಂಖ್ಯೆ ಮತ್ತೇ ಹೆಚ್ಚಾಗಿದ್ದವು. ಆ ವರ್ಷ, 24 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದು IITಗಳು ಮತ್ತೊಮ್ಮೆ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ಕಂಡಿವೆ. ತಮಿಳುನಾಡು : ಪಟಾಕಿ ಗೋದಾಮು ಸ್ಪೋಟ – 9ಮಂದಿ ದುರ್ಮರಣ

2023ರಲ್ಲಿ 20 ಆತ್ಮಹತ್ಯೆಗಳು ನಡೆದಿದ್ದು, ಕೊನೆಯ ಸಾವು ಜುಲೈ 26ರಂದು ನಡೆದಿದೆ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳ ಸಾವಿಗೆ ಸಂಬಂಧಪಟ್ಟ ಪ್ರಶ್ನೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕೇರಳದ ಸಂಸದ ವಿ ಶಿವದಾಸನ್ ಕೇಳಿದ್ದರು.

Copyright © All rights reserved Newsnap | Newsever by AF themes.
error: Content is protected !!