ದಸರಾ ಆಚರಣೆ ಅದ್ದೂರಿ : ಜುಲೈ 31 ಸಿಎಂ ಅಧ್ಯಕ್ಷತೆ ಉನ್ನತ ಮಟ್ಟದ ಸಭೆ

Team Newsnap
1 Min Read

ಮೈಸೂರು ಜಿಲ್ಲಾ ಸಚಿವ ಡಾ. ಮಹದೇವಪ್ಪ ಪ್ರಕಟ

ನಾಡಹಬ್ಬ ಮೈಸೂರು ದಸರಾ, ಜಂಬುಸವಾರಿಯನ್ನು ಈ ವರ್ಷವೂ ಅತ್ಯಂತ ವಿಜ್ರಂಬಣೆಯಿಂದ ಆಚರಿಸೋಣ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್‍ಸಿ ಮಹದೇವಪ್ಪ ಶನಿವಾರ ಹೇಳಿದರು

ಸುದ್ದಿಗಾರರ ಜೊತೆ ಮಾತನಾಡಿದ ಡಾ ಮಹದೇವಪ್ಪ ನಾಡಹಬ್ಬ ಮೈಸೂರು ದಸರಾವನ್ನು ಅತ್ಯಂತ ವಿಜ್ರಂಭಣೆ ಸಡಗರ ಸಂಭ್ರಮದಿಂದ ಆಚರಿಸಲು ಸಿಎಂ ನೇತೃತ್ವದಲ್ಲಿ ಜು 31 ರಂದು ಉನ್ನತ ಮಟ್ಟದ ಸಭೆಯೊಂದನ್ನು ನಡೆಸಲಾಗುವುದು ಎಂದರು

ಕಳೆದ ಹಲವು ವರ್ಷಗಳಿಂದ ಕೋವಿಡ್ ಪರಿಣಾಮದಿಂದ ಜನರು ಕತ್ತರಿಸಿ ಹೋಗಿದ್ದರು ಆದರೆ ಈಗ ಎಲ್ಲವೂ ಬದಲಾಗಿ ರಾಜ ಸುಭಿಕ್ಷವಾಗಿದೆ ಎಲ್ಲಾ ಕಡೆಗೂ ಮಳೆಯೂ ಬಂದಿದೆ . ದಸರಾ ಹಬ್ಬವನ್ನು ಎಲ್ಲರೂ ಸೇರಿ ಆಚರಿಸೋಣ ಎಂದು ತಿಳಿಸಿದರು. ಬೆಂ- ಮೈ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಗುಂಡ್ಲುಪೇಟೆಯ ಯುವ ಕಲಾವಿದ ಸಾವು

ಜುಲೈ 31ರಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ದಸರಾ ಹಬ್ಬದ ಆಚರಣೆ ಕುರಿತಂತೆ ಜು 31ರಂದು ಬೆಂಗಳೂರಿನಲ್ಲಿ ನಲ್ಲಿ ಸಿಎಂ ನೇತೃತ್ವದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದೆ.ಈ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟಂತಹ ಮುಖ್ಯಸ್ಥರು ಭಾಗವಹಿಸುವಂತೆ ಸೂಚಿಸಲಾಗಿದೆ. ಮೈಸೂರು ದಸರಾ ಹಬ್ಬದ ಕುರಿತಾಗಿ ಸ್ವತಃ ಸಿದ್ಧರಾಮಯ್ಯನವರು ಸಭೆಯಲ್ಲಿ ಹಬ್ಬದ ರೂಪುರೇಷೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ದಸರಾ ಹಬ್ಬದಂದು ಗಜ ಪಯಣ ಸ್ತಬ್ಧ ಚಿತ್ರಗಳು ಹಾಗೂ ಮೈಸೂರು ಮಹಾರಾಜರ ಇತಿಹಾಸ ಪರಂಪರೆ ಸಂಸ್ಕೃತಿ ಎಲ್ಲವನ್ನು ಉಳಿಸಿಕೊಂಡು ಅತ್ಯಂತ ಸಡಗರ ಸಂಭ್ರಮದಿಂದ ಮೈಸೂರು ದಸರಾ ಆಚರಿಸೋಣ ಎಂದರು

Share This Article
Leave a comment