ಬೆಂ- ಮೈ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಗುಂಡ್ಲುಪೇಟೆಯ ಯುವ ಕಲಾವಿದ ಸಾವು

Team Newsnap
1 Min Read

ಮಂಡ್ಯ : ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವ ಚಿತ್ರ ಕಲಾವಿದ, ನಟ ಲೋಕೇಶ್ (39) ಮೃತಪಟ್ಟಿದ್ದಾರೆ. ಈ ಘಟನೆ ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಯಲಿಯೂರು ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಲೋಕೇಶ್ ಪತ್ನಿ, ಪುತ್ರಿಯನ್ನು ಅಗಲಿದ್ದಾರೆ, ಕೈ ಕಾಲು ತುಂಡಾದ ಸ್ಥಿತಿಯಲ್ಲಿ ಲೋಕೇಶ್ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಲೋಕೇಶ್ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂ- ಮೈ ಹೆದ್ದಾರಿ ಅಪಘಾತ, ಸಾವಿನ ಸಂಖ್ಯೆ ಇಳಿಮುಖ – ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗ್ರಾಮದವರಾದ ಲೋಕೇಶ್ ಹಲವು ಕಲಾ ನಿರ್ದೇಶಕರ ಬಳಿ ಕೆಲಸ ಮಾಡಿದ್ದರು. ಅಮೂಲ್ಯ ರತ್ನ ಕಿರುಚಿತ್ರ ಹಾಗೂ ಫ್ಯಾಮಿಲಿ ಪ್ಯಾಕ್ ಚಲನಚಿತ್ರದಲ್ಲಿ ಲೋಕೇಶ್ ಅಭಿನಯಿಸಿದ್ದರು.

Share This Article
Leave a comment