ನವದೆಹಲಿ : ಕೇಂದ್ರೀಯ ವಿಶ್ವವಿದ್ಯಾಲಯಗಳು, IIT, NIT, IIM,I IITಗಳಲ್ಲಿ 2018ರಿಂದ 2023ರವರೆಗೆ 98 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತಾಗಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (IISER), ಶಿಕ್ಷಣ ಸಚಿವಾಲಯ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ. ಅತ್ಯಧಿಕ ಸಂಖ್ಯೆಯ ಆತ್ಮಹತ್ಯೆಗಳು ಪ್ರೀಮಿಯರ್ ಇಂಜಿನಿಯರಿಂಗ್ ಸಂಸ್ಥೆಗಳಿಂದ ವರದಿಯಾಗಿದೆ.
![iit iim](https://kannada.thenewsnap.com/wp-content/uploads/2023/07/iit-iim-1024x538.jpg)
IITಗಳಿಂದ ಬರೋಬ್ಬರಿ 8,139 ವಿದ್ಯಾರ್ಥಿಗಳು ಡ್ರಾಪ್‌ಔಟ್ ಆಗಿದ್ದು. ಸಂಸತ್ತಿನ ಪ್ರತಿಕ್ರಿಯೆಯ ಪ್ರಕಾರ, ಡ್ರಾಪ್ಔಟ್ಗಳು ಸ್ನಾತಕೋತ್ತರ ಅಥವಾ ಸಂಶೋಧನಾ ಕಾರ್ಯಕ್ರಮಗಳಿಂದ ಬಂದವರಾಗಿದ್ದಾರೆ. ರಾಹುಲ್ ಗಾಂಧಿ ಮದುವೆ ಯಾವಾಗ ? ಸೋನಿಯಾ ಉತ್ತರ ಸೋಜಿಗ !
2018ರಲ್ಲಿ, ಐಐಟಿಗಳು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ತಲಾ ಎಂಟು ವಿದ್ಯಾರ್ಥಿಗಳಂತೆ ಎಲ್ಲಾ ಸಂಸ್ಥೆಗಳಲ್ಲಿ ಒಟ್ಟು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ, NIT ಗಳ ಜತೆಗೆ IITಗಳು ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ಕಂಡಿವೆ. ಆ ವರ್ಷ ಒಟ್ಟು 19 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. 2020 ಮತ್ತು 2021ರ ಕೋವಿಡ್ ಸಾಂಕ್ರಾಮಿಕ ವರ್ಷಗಳಲ್ಲಿ ಕ್ಯಾಂಪಸ್‌ಗಳನ್ನು ಮುಚ್ಚಿದ್ದರಿಂದ ಮತ್ತು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರಿಂದ ಆತ್ಮಹತ್ಯೆ ದರಗಳು ಕಡಿಮೆಯಾಗಿದೆ. ಆದಾಗ್ಯೂ, 2022ರಲ್ಲಿ ಸಂಸ್ಥೆಗಳು ಪುನರಾರಂಭಗೊಂಡ ನಂತರ ಆತ್ಮಹತ್ಯೆ ಸಂಖ್ಯೆ ಮತ್ತೇ ಹೆಚ್ಚಾಗಿದ್ದವು. ಆ ವರ್ಷ, 24 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದು IITಗಳು ಮತ್ತೊಮ್ಮೆ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ಕಂಡಿವೆ. ತಮಿಳುನಾಡು : ಪಟಾಕಿ ಗೋದಾಮು ಸ್ಪೋಟ – 9ಮಂದಿ ದುರ್ಮರಣ
2023ರಲ್ಲಿ 20 ಆತ್ಮಹತ್ಯೆಗಳು ನಡೆದಿದ್ದು, ಕೊನೆಯ ಸಾವು ಜುಲೈ 26ರಂದು ನಡೆದಿದೆ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳ ಸಾವಿಗೆ ಸಂಬಂಧಪಟ್ಟ ಪ್ರಶ್ನೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕೇರಳದ ಸಂಸದ ವಿ ಶಿವದಾಸನ್ ಕೇಳಿದ್ದರು.
More Stories
ತಿನಿಸುವುದರಲ್ಲಿನ ಆನಂದ ತಿನ್ನುವುದರಲ್ಲಿಲ್ಲ…!
ಪುದೀನಾದ ಕಣ ಕಣದಲ್ಲೂ ಇದೆ ಔಷಧ ಗುಣ
ರಾಷ್ಟ್ರೀಯ ಮತದಾರರ ದಿನ (ಜನವರಿ 25)