ಚೀರನಹಳ್ಳಿಯಲ್ಲಿ ಸೌಹಾರ್ದಯುತ ಕೊಂಡಿ ಬೆಸುಗೆ: ಇಫ್ತಿಯಾರ್ ಕೂಟ – ಮಾದರಿಯಾದ ಪಂಕ್ತಿ ಭೋಜನ

Team Newsnap
1 Min Read

ದೇಶ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ಧತೆ ಹದಗಟ್ಟಿರುವ ಈ ಸಂದರ್ಭದಲ್ಲಿ ತಾಲ್ಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಮುಸ್ಲಿಂ ಬಾಂಧವರಿಗಾಗಿ ಸೌಹಾರ್ದ ಇಫ್ತಿಯಾರ್ ಕೂಟ ಏರ್ಪಡಿಸಲಾಗಿತ್ತು.

IFATHIYA 1

ಸರ್ಕಾರಿ ಪ್ರಾಯೋಜಿತ ಕೋಮುದ್ವೇಷ ಹರುಡುತ್ತಿರುವುದರಿಂದ ಇದಕ್ಕೆ ಮದ್ದೆಂಬಂತೆ ಹಳ್ಳಿಯಲ್ಲಿ ಇಫ್ತಿಯಾರ್ ಕೂಟ ಆಯೋಜಿಸಿ ಸಾಮರಸ್ಯ ಮೆರೆದಿದ್ದು ವಿಶೇಷವಾಗಿತ್ತು.

ಇಫ್ತಿಯಾರ್ ಸೌಹಾರ್ದ ಕೂಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಮುಸ್ಲಿಂ, ಕ್ರಿಶ್ಚಿಯನ್, ದಲಿತರು, ಹಿಂದುಳಿದ ಸಮುದಾಯಗಳು ಒಟ್ಟುಗೂಡಿ ಊಟ ಮಾಡುವುದರ ಮೂಲಕ ಸೌಹಾರ್ದತೆ ಮೆರೆದರು.

ಚೀರನಹಳ್ಳಿ ಗ್ರಾಮದ ಗಂಗಮತಸ್ತರು, ವಕ್ಕಲಿಗರು, ದಲಿತರೂ ಸೇರಿದಂತೆ ಸೌಹಾರ್ದ ಕೂಟಕ್ಕೆ ಸಾಕ್ಷಿಯಾದರು.

ಇಪ್ತಿಯಾರ್ ಸೌಹಾರ್ದ ಕೂಟ ಆಯೋಜನೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಲಕ್ಷ್ಮಣ್ ಚೀರನಹಳ್ಳಿ, ಮಾನವ ಸಂಬಂಧಗಳು ಜಾತಿ ಧರ್ಮದ ಹೆಸರುಗಳಲ್ಲಿ ಒಡೆದೋಗುತ್ತಿವೆ. ದೇಶ ಎಂದರೆ ಮಣ್ಣು, ಭೂಮಿಯಲ್ಲ’ ಜನ .’ ಸಾವಿರಾರು ವರ್ಷಗಳಿಂದ ಅಣ್ಣ ತಮ್ಮಂದಿರಂತಿದ್ದದ್ದ ಜನತೆ ಇಂದು ಭಯ ಮತ್ತು ಆತಂಕದ ಸ್ಥಿತಿಯಲ್ಲಿ ಬದುಕುವಂತಾಗಿದೆ. ರಾಜಕೀಯ ಹುನ್ನಾರಗಳಿಗೆ ಬಲಿಯಾಗಿ ಶಾಂತಿ ಸಾಮಾರಸ್ಯ ಸೌಹಾರ್ದತೆಯನ್ನ ಹಾಳು ಮಾಡಬಾರದೆಂಬ ಉದ್ದೇಶದಿಂದ ಈ ಸೌಹಾರ್ದ ಭೋಜನ ಕೂಟವನ್ನು ಆಯೋಜಿಸಲಾಗಿದೆ ಎಂದರು.

ಎಂತಹ ವಿಷಮ ಸ್ಥಿತಿ ಬಂದರೂ ನಾವೆಲ್ಲಾ ಒಟ್ಟಾಗಿರುವುದು ಈಗಿನ ಅಗತ್ಯ’ – ನಮ್ಮೆಲ್ಲರ ಇಂದಿನ ಒಗ್ಗಟ್ಟೆ ಸಮಾಜಕ್ಕೊಂದು ಸಂದೇಶವೆಂದರು.

ಕಾರ್ಯಕ್ರಮದಲ್ಲಿ ವಕೀಲ ಕೆ. ಬಾಲನ್, ಪ್ರಗತಿಪರ ಚಿಂತಕ ‘ ವಿಚಾರವಾದಿ ಮಂಟೇಲಿಂಗಯ್ಯ, ರೈತಸಂಘದ ಸುದೀರ್, ಹಿಂದುಳಿದ ವರ್ಗಗಳ ವೇದಿಕೆ ಎಲ್. ಸಂದೇಶ್, ಮುಸ್ಲಿಂ ಒಕ್ಕೂಟದ ಮುಕ್ತಿಯಾರ್, ಸವಿತಾ ಸಮಾಜದ ಬೋರಪ್ಪ, ಗಂಗಮತಸ್ಥ ಸಮುದಾಯ ಮುಖಂಡ ಮಂಜುನಾಥ ಒಕ್ಕಲಿಗ ಸಮುದಾಯದ ಮಿತ್ರ ರಮೇಶ ಹಾಗೂ ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘನೆಗಳ ಮುಖಂಡರೂ ಹಾಗೂ ಹಲವು ಜಿಲ್ಲೆಗಳಿಂದಲೂ ಸೌಹಾರ್ದ ಪ್ರೇಮಿಗಳು ಭಾಗವಹಿಸಿದ್ದರು.

ಕಾಯ೯ಕ್ರಮವನ್ನು ವಕೀಲ ಲಕ್ಷಣ್ ಚೀರನಹಳ್ಳಿ ಮತ್ತು ಕುಟುಂಬವು ಹಳ್ಳಿಯಲ್ಲಿ ಇಷ್ತಿಯಾರ್ ಸೌಹಾರ್ದ ಕೂಟವನ್ನು ಆಯೋಜನೆ ಮಾಡಿ ಸಾಮರಸ್ಯ ಮತ್ತು ಸೌಹಾದತೆಯ ಸಂದೇಶಕ್ಕೆ ವೇದಿಕೆ ನಿರ್ಮಾಣ ಮಾಡಿತ್ತು.

Share This Article
Leave a comment