ವಿಶ್ವದಲ್ಲೇ ಅತಿ ಹೆಚ್ಚು Military ವೆಚ್ಚ ಮಾಡುವ 3 ನೇ ದೇಶ ಭಾರತ

Team Newsnap
1 Min Read

ವಿಶ್ವ ಸೇನಾ ವೆಚ್ಚವು 2021 ರಲ್ಲಿ ಸಾರ್ವಕಾಲಿಕ ಗರಿಷ್ಠ USD 2.1 ಟ್ರಿಲಿಯನ್‌ಗೆ ತಲುಪಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಸೋಮವಾರ ಹೇಳಿದೆ.

ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಭಾರತವು ಮೊದಲ ಮೂರು ದೊಡ್ಡದಾದ ಸೇನಾ ವೆಚ್ಚ ಮಾಡುವ ರಾಷ್ಟ್ರಗಳು ಎಂದು ಹೇಳಿವೆ.

“ಒಟ್ಟು ಜಾಗತಿಕ ಮಿಲಿಟರಿ ವೆಚ್ಚವು 2021 ರಲ್ಲಿ 0.7 ಪ್ರತಿಶತದಷ್ಟು ಹೆಚ್ಚಾಗಿದೆ, USD 2113 ಶತಕೋಟಿಗೆ ತಲುಪಿದೆ. 2021 ರಲ್ಲಿ ಐದು ದೊಡ್ಡ ಖರ್ಚು ಮಾಡಿದವರು ಯುನೈಟೆಡ್ ಸ್ಟೇಟ್ಸ್, ಚೀನಾ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾ, ಒಟ್ಟಾಗಿ ಶೇ 62 ರಷ್ಟು ಖರ್ಚು ಹೊಂದಿದ್ದಾರೆ. ಎಂದು ಸ್ಟಾಕ್‌ಹೋಮ್ ಮೂಲದ ಹೇಳಿಕೆಯಲ್ಲಿ ತಿಳಿಸಿದೆ.

ಜಾಗತಿಕ ದೇಶಗಳ ಒಟ್ಟು ಮಿಲಿಟರಿ ಖರ್ಚುನಲ್ಲಿ ಅಮೆರಿಕ 38% ಹೂಡಿಕೆ ಹೊಂದಿದ್ದರೆ ಚೀನಾ 14% ಖರ್ಚು ಮಾಡುತ್ತಿದೆ. ಚೀನಾ 27 ವರ್ಷಗಳಿಂದ ಗಣನೀಯವಾಗಿ ಮಿಲಿಟರಿ ಖರ್ಚು ಹೆಚ್ಚು ಮಾಡುತ್ತಾ ಬಂದಿದೆ. 2016 ರಿಂದ 2019 ವರೆಗೂ ಮಿಲಿಟರಿ ಮೇಲೆ ಖರ್ಚು ಕಡಿಮೆ ಮಾಡಿದ್ದ ರಷ್ಯಾ ಈಗ ಮತ್ತೆ ತನ್ನ ಖರ್ಚು ಹೆಚ್ಚಿಸಿದೆ. ಉಕ್ರೇನ್‍ನಲ್ಲಿ ಮಿಲಿಟರಿ ವೆಚ್ಚವು 2021 ರಲ್ಲಿ 5.9 ಶತಕೋಟಿಗೆ ಕುಸಿದಿದ್ದರೂ, ಅದು ಅದರ GDP ಯ 3.2 ಶೇಕಡಾವನ್ನು ಹೊಂದಿದೆ.

RankCountrySpending
(US$ bn)
% of GDP% of global spending
World total2,1132.2100%
1USA801.03.538%
2 ಚೀನಾ293.01.714%
3 ಭಾರತ76.62.73.6%
4UK68.42.23.2%
5 ರಷ್ಯಾ 65.94.13.1%
6 ಫ್ರಾನ್ಸ್56.61.92.7%
7ಜರ್ಮನಿ56.01.32.7%
8 ಸೌದಿ ಅರೇಬಿಯಾ55.66.62.6%
9 ಜಪಾನ್54.11.12.6%
10 ಸೌತ್ ಕೊರಿಯಾ50.22.82.4%
Share This Article
Leave a comment