ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ನಟ ಚಿಕ್ಕಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ತಿಳಿದ ಕೆಲವರು ಚಿಕ್ಕಣ್ಣಗೆ ಕಾಲ್ ಮಾಡಿ ಆರೋಗ್ಯ ವಿಚಾರಿಸಿಕೊಂಡರು. ಇದೀಗ ಆ ಕುರಿತು ಸ್ವತಃ ಚಿಕ್ಕಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.ಇದನ್ನು ಓದಿ – ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯ – ತಪ್ಪಿದರೆ ಅಂಗಡಿ ಲೈಸನ್ಸ್ ರದ್ದು
ಸದ್ಯ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಚಿತ್ರೀಕರಣ ಸ್ಥಳದಿಂದಲೇ ವಿಡಿಯೋವೊಂದನ್ನು ಕಳುಹಿಸಿರುವ ಅವರು, “ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸುದ್ದಿ ಸುಳ್ಳು. ಯಾರೋ ಕಿಡಿಗೇಡಿಗಳು ಆ ರೀತಿ ಮಾಡಿದ್ದಾರೆ. ನಾನು ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿದ್ದೇನೆ. ಅದೇ ಸ್ಥಳದಿಂದಲೇ ಈಗ ಮಾತನಾಡುತ್ತಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಆರೋಗ್ಯ ಗಟ್ಟಿಮುಟ್ಟಾಗಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದಿದ್ದಾರೆ. ಚಿಕ್ಕಣ್ಣ ಅವರ ವಿಷಯದಲ್ಲಿ ಆಗಾಗ್ಗೆ ಈ ರೀತಿ ಸುಳ್ಳು ಸುದ್ದಿಗಳು ಹರಡುತ್ತಲೇ ಇರುತ್ತವೆ. ಈ ಹಿಂದೆ ನಿರೂಪಕಿಯೊಬ್ಬರನ್ನು ಚಿಕ್ಕಣ್ಣ ಮದುವೆ ಆಗಿದ್ದಾರೆ ಎಂದು ಗಾಸಿಪ್ ಹರಡಿಸಿದ್ದರು.ಇಂದು ಅವರ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡಿದೆ.
- ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ
- ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ
- ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು
- ಹೆಚ್ ಡಿ ಕೋಟೆ ಬಳಿ : ನಾಲೆಗೆ ಬಿದ್ದ ಪುತ್ರಿ ರಕ್ಷಣೆಗೆ ಹೋದ ಅಪ್ಪ – ಅಮ್ಮನೂ ದುರಂತ ಸಾವು
- ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023
- ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ: ಸಿದ್ದರಾಮಯ್ಯ