ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯ – ತಪ್ಪಿದರೆ ಅಂಗಡಿ ಲೈಸನ್ಸ್ ರದ್ದು

Team Newsnap
1 Min Read

ರಾಜ್ಯದ ಎಲ್ಲಾ ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಿ, ಸರ್ಕಾರ ಆದೇಶಿಸಿದೆ. ಒಂದು ವೇಳೆ ಈ ನಿಯಮ ತಪ್ಪಿದಲ್ಲಿ ಅಂಗಡಿಯ ಪರವಾನಗಿಯನ್ನೇ ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದೆ.

ಕಲಬುರಗಿ ಪಾಲಿಕೆಯ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿನಂತೆ ಕರ್ನಾಟಕದಲ್ಲಿ ಕನ್ನಡ ಭಾಷೆಯು ಆಡಳಿತ ಭಾಷೆಯಾಗಿದೆ, ರಾಜ್ಯದಲ್ಲಿನ ನಾಮಫಲಕಗಳಲ್ಲಿ ಕನ್ನಡ ಬಳಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.ಇದನ್ನು ಓದಿ –ದೇವೇಗೌಡರ ಬಗ್ಗೆ ಲಘು ಮಾತು: ರಾಜಣ್ಣ ವಿರುದ್ದ ಕಾಂಗ್ರೆಸ್ ಕ್ರಮಕ್ಕೆ ಮಂಡ್ಯದಲ್ಲಿ CSP ಆಗ್ರಹ

ಕನ್ನಡ ಭಾಷೆಯ ನಾಮಫಲಕಗಳಲ್ಲಿ ಕನ್ನಡವನ್ನು ಅಗ್ರಸ್ಥಾನದಲ್ಲಿ ಬಳಸದೇ ಇದ್ದಲ್ಲಿ, ಉದ್ದಿಮೆ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂಬ ನಿಬಂಧನೆ ವಿಧಿಸಲು ಸರ್ಕಾರ ಆದೇಶಿಸಿದೆ.

ಅನ್ಯಭಾಷೆಯ ನಾಮಫಲಕಗಳಿಗಿಂತ ಕನ್ನಡ ಭಾಷೆಯನ್ನು ದಪ್ಪ, ದೊಡ್ಡ ಅಕ್ಷರಗಳಲ್ಲಿ ಇರುವಂತೆ ಹಾಕುವುದು. ಈ ನಿಯಮ ತಪ್ಪಿದಲ್ಲಿ ಅಂತಹ ಉದ್ದಿಮೆ, ವಾಣಿಜ್ಯ ಅಂಗಡಿ-ಮುಂಗಟ್ಟುಗಳ ಪರವಾನಗಿಯನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a comment