ವಸತಿರಹಿತರ ಧರಣಿ 6ನೇ ದಿನಕ್ಕೆ: ಉಸ್ತುವಾರಿ ಸಚಿವರಿಗೆ ಘೇರಾವ್ ಎಚ್ಚರಿಕೆ

Team Newsnap
1 Min Read

ನಿವೇಶನ ರಹಿತರು ಸ್ವಂತ ಸೂರಿಗಾಗಿ ಮಂಡ್ಯ ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟವಧಿ ಧರಣಿ ಆರನೇ ದಿನಕ್ಕೆ ಕಾಲಿರಿಸಿದೆ.
ಸ್ವಂತ ಸೂರಿಗಾಗಿ ಜಿಲ್ಲಾದ್ಯಂತ ಸಾಕಷ್ಟು ಹೋರಾಟಗಳು ನಡೆದಿವೆ.

ಬೂದನೂರು ಗ್ರಾಪಂ ವ್ಯಾಪ್ತಿಯ ನಿವೇಶನರಹಿತರು ಕಳೆದ ಆರು ದಿನಗಳಿಂದ ಧರಣಿ ನಡೆಸುತ್ತಿದ್ದರು ಜಿಲ್ಲಾಡಳಿತವಾಗಲಿ ಉಸ್ತುವಾರಿ ಸಚಿವರಾಗಲಿ ಸಕರಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಸ್ವಂತಮನೆ ನಮ್ಮ ಹಕ್ಕು ಸಂಚಾಲಕ ಎಂ.ಬಿ.ನಾಗಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆಗಸ್ಟ್ ೧೫ರಂದು ನಗರದ ಸಂಜಯ ವೃತ್ತದಲ್ಲಿ ಧರಣಿ ನಡೆಸಿದ ಸಂಧರ್ಭದಲ್ಲಿ ಭೇಟಿ ನೀಡಿ ಅಹವಾಲು ಸ್ವೀಕರಿಸಿದ ಉಸ್ತುವಾರಿ ಸಚಿವ ಕೆ.ಸಿ.ನಾರಯಣಗೌಡ ಹದಿನೈದು ದಿನಗಳೊಳಗೆ ವಸತಿ ಸಂಬಂದ ಜಂಟಿ ಸಭೆ ನಡೆಸುವ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಯಾವುದೇ ಸಭೆ ಆಯೋಜಿಸದೆ ನಿರ್ಲಕ್ಷ ತೋರಿದ್ದಾರೆ.ಕಾಲಮಿತಿಯೊಳಗೆ ವಸತಿರಹಿತರ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಿ ರಜಾದಿನವಾದ ಇಂದು ಸಹ ಧರಣಿ ಮುಂದುವರೆದಿದ್ದು ಧರಣಿಯಲ್ಲಿ ಗಾಣದಾಳು ಅಭಿಲಾಶ್.ಬಿ. ಕೆ. ಸತೀಶ್. ಸುನೀಲ್.ಪ್ರೇಮಾ.ಪದ್ಮಾ ಮಹದೇವಿ ಸೇರಿದಂತೆ ಹಲವರಿದ್ದರು

Share This Article
Leave a comment