ಮಂಡ್ಯದಲ್ಲಿ ಮಳೆ – ವರುಣನ ಆರ್ಭಟಕ್ಕೆ ಬೆಂಗಳೂರು ಜನ ತತ್ತರ : ರಸ್ತೆಗಳು ಜಲವೃತ

Team Newsnap
1 Min Read

ಕಳೆದ ಕೆಲ ದಿನಗಳಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ ಶನಿವಾರ ರಾಜ್ಯದಲ್ಲಿ ಮತ್ತೆ ಜೋರಾಗಿದೆ,ಮಂಡ್ಯ ಸೇರಿದಂತೆ ಕೆಲವೆಡೆ ಮಳೆ ಸುರಿದಿದೆ, ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರಿ ಮಳೆ .

ಧಾರಾಕಾರ ಮಳೆಯಿಂದ ಬೆಂಗಳೂರಿನ ರಸ್ತೆಗಳೆಲ್ಲಾ ಜಲಾವೃತವಾಗಿ ವಾಹನ ಸವಾರರು ಹಾಗೂ ತಗ್ಗು ಪ್ರದೇಶ ಜನರು ಪರದಾಡುವಂತಾಗಿತ್ತು.

ಬೆಂಗಳೂರಿನ ಜೆ.ಸಿ.ನಗರ, ಮೇಖ್ರಿ ಸರ್ಕಲ್, ಜಯನಗರ, ವಿಜಯ ನಗರ, ರಾಜಾಜಿನಗರ, ಹೆಬ್ಬಾಳ,ಕೆಂಗೇರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.

ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದವು. ಶಾಂತಿನಗರ ಡಬಲ್ ರೋಡ್​ನಲ್ಲಿ ಹೊಳೆಯಂತೆ ರಸ್ತೆಯಲ್ಲಿ ಮಳೆ ನೀರು ಹರಿದಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನ 14ನೇ ಕ್ರಾಸ್​ನ ಮನೆಗಳಿಗೆ ಮಳೆ ನೀರು ನುಗ್ಗಿದ ಅವಾಂತರವೇ ಸೃಷ್ಟಿಯಾಗಿತ್ತು. ಮನೆಗಳಲ್ಲಿ ಮೊಣಕಾಲುದ್ದ ನೀರು ನಿಂತುಕೊಂಡಿದ್ದರಿಂದ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮನೆಗಳಿಗೆ ನುಗ್ಗಿದ ನೀರನ್ನು ನಿವಾಸಿಗಳು ರಾತ್ರಿ ಇಡೀ ಹೊರಹಾಕಲು ಹರಸಾಹಸವೇ ಪಟ್ಟಿದ್ದಾರೆ. ಸ್ಥಳೀಯ ನಿವಾಸಿಗಳು ಸರ್ಕಾರ ಮತ್ತು ಬಿಬಿಎಂಪಿಗೆ ಹಿಡಿಶಾಪ ಹಾಕಿದರು

ಮಂಡ್ಯದಲ್ಲೂ ಕೂಡ ರಾತ್ರಿ 8 ಗಂಟೆಗೆ ಗುಡುಗು ಸಹಿತ ಮಳೆ ಆರಂಭವಾಗಿ ರಾತ್ರಿ 11.30 ರ ತನಕ ಎಡಬಿಡದೇ ಸುರಿಯಿತು.

Share This Article
Leave a comment