ಇಬ್ಬರು ಜಿಲ್ಲಾ ಉಸ್ತುವಾರಿ ಸಚಿವರ ಅದಲು – ಬದಲು ಮಾಡಿದ್ದ ಬೆಳಗಿನ ಆದೇಶ ಸಂಜೆಗೆ ವಾಪಸ್

anand sing jolle

ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಶನಿವಾರ ಬೆಳಗ್ಗೆ ವಿಜಯನಗರ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನು ಅದಲು ಬದಲು ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದೇ ಆದೇಶವನ್ನು ಸರ್ಕಾರ ಸಂಜೆ ವೇಳೆಗೆ ವಾಪಸ್ ಪಡೆದಿದೆ.

cm copy

ಸರ್ಕಾರ ಬೆಳಗ್ಗೆ ನೀಡಿದ್ದ ಆದೇಶದಿಂದ ಸಚಿವ ಆನಂದ್ ಸಿಂಗ್ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟಿದ್ದರು. ಆದರೆ ಸಂಜೆ ಸರ್ಕಾರ ಆದೇಶ ಹಿಂಪಡೆದ ಹಿನ್ನೆಲೆ ಆನಂದ್ ಸಿಂಗ್ ಅಭಿಮಾನಿಗಳಿಗೆ ನಿರಾಶೆ ತಂದಿದೆ.

ನೂತನ ವಿಜಯನಗರ ಜಿಲ್ಲೆ ಉದಯವಾದ ಬಳಿಕ ಮೊದಲ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆನಂದ್ ಸಿಂಗ್ ನೇಮಕವಾಗಿದ್ದರು.

ಬಳಿಕ ಆನಂದ್ ಸಿಂಗ್ ಅವರನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಶಿಕಲಾ ಜೊಲ್ಲೆ ನೇಮಕಗೊಂಡಿದ್ದರು.
ಸ್ವಂತ ಜಿಲ್ಲೆಯ ಸಚಿವರುಗಳಿಗೆ ಬೇರೆ ಜಿಲ್ಲೆ ಉಸ್ತುವಾರಿ ನೀಡಲಾಗಿತ್ತು,

ಇದುತೀವ್ರ ವಿವಾದಕ್ಕೆ ಕಾರಣವಾಗಿದ್ದ ಹಿನ್ನೆಲೆ ಶನಿವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಅದಲು ಬದಲು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸಂಜೆ ವೇಳೆಗೆ ಬೆಳಗ್ಗೆ ನೀಡಿದ್ದ ಆದೇಶವನ್ನು ತಡೆ ಹಿಡಿದು, ಯಥಾಸ್ಥಿತಿ ಕಾಪಾಡಲು ಸರ್ಕಾರ ಸೂಚನೆ ನೀಡಿದೆ.

Leave a comment

Leave a Reply

Your email address will not be published. Required fields are marked *

error: Content is protected !!