ಸುರತ್ಕಲ್ ಫಾಜಿಲ್​ ಹತ್ಯೆಗೆ ಸಾಥ್​ ನೀಡಿದ್ದ ಕಾರ್ ಚಾಲಕ ಕಂ ಮಾಲೀಕ ಅಜಿತ್ ಬಂಧನ

Team Newsnap
1 Min Read
Ajith, who assisted in the killing of Suratkal Fazil, is arrested ಸುರತ್ಕಲ್ ಫಾಜಿಲ್​ ಹತ್ಯೆಗೆ ಸಾಥ್​ ನೀಡಿದ್ದ ಕಾರ್ ಚಾಲಕ ಕಂ ಮಾಲೀಕ ಅಜಿತ್ ಬಂಧನ

ಮಂಗಳೂರಿನ ಸುರತ್ಕಲ್ ನಲ್ಲಿ ಜು 28 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಫಾಜಿಲ್ ಪ್ರಕರಣದಲ್ಲಿ ಆರೋಪಿಗಳಿಗೆ ಸಾಥ್ ನೀಡಿದ್ದ ಕಾರ್ ಚಾಲಕ ಕಂ ಮಾಲೀಕ ಅಜಿತ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಫಾಜಿಲ್​ ಕೊಲೆ ಆಗುವ ತನಕ ಅಜಿತ್ ಕಾರಿನಲ್ಲೇ ಕಾಯುತ್ತಿದ್ದ ನಂತರ ಕೃತ್ಯ ಮಗಿದ ​ ಬಳಿಕ ಹಂತಕರು ಎಸ್ಕೇಪ್ ಆಗಲು ಅಜಿತ್ ಸಹಕರಿಸಿದ್ದಾನೆಂದು ತನಿಖೆಯಿಂದ ಗೊತ್ತಾಗಿದೆ.ಇದನ್ನು ಓದಿ –ಮಂಡ್ಯದಲ್ಲಿ ಮಳೆ – ವರುಣನ ಆರ್ಭಟಕ್ಕೆ ಬೆಂಗಳೂರು ಜನ ತತ್ತರ : ರಸ್ತೆಗಳು ಜಲವೃತ

ಫಾಸಿಲ್ ಹಂತಕರ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸುಳಿವು ನೀಡಿತ್ತು. ಇದರ ಅನ್ವಯ 30ಕ್ಕೂ ಹೆಚ್ಚು ಸಿಸಿಟಿವಿ ಮಾಹಿತಿಯನ್ನು ಕಲೆ ಹಾಕಿರುವ ಮಂಗಳೂರು ಸಿಸಿಬಿ ಪೊಲೀಸರು ಹಂತಕರ ಕಾರಿನ ದೃಶ್ಯಗಳನ್ನು ಸಂಗ್ರಹಿಸಿದ್ದರು.

ಟೋಲ್​​ಗೇಟ್​ನ ಸಿಸಿಟಿವಿಯಲ್ಲಿ ಹಂತಕರ ಕಾರು ಪಾಸ್​ ಆಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಹಂತಕರು ಬಿಳಿ ಬಣ್ಣದ KA19 ಸಿರೀಸ್​​ನ ಹ್ಯುಂಡೈ ಇಯಾನ್ ಕಾರ್ ಬಳಸಿದ್ದನ್ನು ಖಚಿತ ಪಡಿಸಿಕೊಂಡಿದ್ದರು. ಕೂಡಲೇ ಮಾಹಿತಿ ಪತ್ತೆ ಮಾಡಲು RTO ಬಳಿ ತೆರಳಿದ್ದ ಟೀಂ, ಮಂಗಳೂರಿನಲ್ಲಿ 200 ಕ್ಕೂ ಹೆಚ್ಚು ಇಯಾನ್ ಕಾರುಗಳ ಲಿಸ್ಟ್​ ಪಡೆದುಕೊಂಡು, ಅದರಲ್ಲಿ ಬಿಳಿ ಬಣ್ಣದ ಇಯಾನ್ ಕಾರು ಅದರಲ್ಲೂ KA19 ಸಿರೀಸ್ ಪತ್ತೆ ಮಾಡಿದ್ದರು. ಈ ಮಾಹಿತಿ ಆಧರಿಸಿ 17 ಶಂಕಿತರನ್ನು ಕರೆತಂದು ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಡ್ರೈವರ್ ಬಗ್ಗೆ ಮಾಹಿತಿ ಕಲೆ ಹಾಕುವಾಗ ಈತನೇ ಮಾಲೀಕ ಎಂಬುದು ಪತ್ತೆಯಾಗಿತ್ತು. ಆದರೆ ಘಟನೆ ಬಳಿಕ ಆತ ತಲೆ ಮರೆಸಿಕೊಂಡಿರೋದು ಖಚಿತವಾಗಿತ್ತು. ಕೂಡಲೇ ಆತನ ಪತ್ತೆಗೆ ಮುಂದಾಗಿದ್ದ ಮಂಗಳೂರು ಪೊಲೀಸರು, ನಿನ್ನೆ ತಡ ರಾತ್ರಿ 7 ಗಂಟೆಗೆ ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a comment