July 7, 2022

Newsnap Kannada

The World at your finger tips!

fathers dad

fathers day 2022

ವಿಶ್ವ ಅಪ್ಪಂದಿರ ದಿನ – ಅಪ್ಪ ಎಂದರೆ ಆಕಾಶ

Spread the love

ಅಪ್ಪ ಎಂದರೆ ಆಕಾಶ, ಆತ ತನ್ನ ಅಂಗೈಯಲ್ಲಿರುವ ಚಂದ್ರನಂತೆ ತನ್ನ ಕಪಿಮುಷ್ಟಿಯೊಳಗೆ ತನ್ನ ಮಕ್ಕಳನ್ನು ಅತೀ ಹೆಚ್ಚು ಪ್ರೀತಿಸುವ ಜವಾಬ್ದಾರಿಯುತ, ಮತ್ತು ಕಾಳಜಿಯುಳ್ಳ ವ್ಯಕ್ತಿ. ಗಾಂಭೀರ್ಯದ ಮಾತು, ಕಟ್ಟು ನಿಟ್ಟಿನ ಜೀವನ,ಇಂತಹ ಸಣ್ಣ ಪುಟ್ಟ ನಡತೆಗಳಿಂದಲೇ ಅಪ್ಪ ಆದರ್ಶ ಜೀವನವನ್ನು ಹೇಳಿಕೊಟ್ಟಿರುತ್ತಾರೆ.

ಅತ್ತಾಗ ಬಿಗಿದಪ್ಪಿದ, ಬಿದ್ದಾಗ ಕೈ ಹಿಡಿದು ಮೇಲೆತ್ತಿದ, ತ್ಯಾಗ ಎಂಬ ಪಾಠ ಕಲಿಸಿದ ಅಪ್ಪನಿಗೆ ಕೃತಜ್ಞತೆ ಹೇಳುವ ದಿನ. ಅವರೊಬ್ಬರು ಜೊತೆಗಿದ್ದರೆ ಅದೇನೊ ವಿಶ್ವಾಸ. ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಅಪ್ಪನೇ ಸೂಪರ್ ಹೀರೋ.

ಅಪ್ಪ ಸಾಮಾನ್ಯವಾಗಿ ತಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಮತ್ತು ಆರಾಮದಾಯಕ ಜೀವನವನ್ನು ಒದಗಿಸಲು ಕಷ್ಟಪಟ್ಟು ದುಡಿಯುತ್ತಾರೆ. ತಂದೆ ಯಾವಾಗಲೂ ತನ್ನ ಮಕ್ಕಳ ಕನಸುಗಳು ಮತ್ತು ಆಸೆಗಳನ್ನು ಬೆಂಬಲಿಸುತ್ತಾನೆ. ಕುಟುಂಬ ನಿರ್ವಹಣೆಯಲ್ಲಿ ತನ್ನ ಸಂತೋಷವನ್ನು ಅನೇಕ ಬಾರಿ ತ್ಯಾಗ ಮಾಡುತ್ತಾನೆ. ಹೀಗೆ ಅನೇಕ ಕಾರಣಗಳಿಗಾಗಿ ಆತನನ್ನು ಕುಟುಂಬದ ಮುಖ್ಯಸ್ಥ ಎಂದು ಕರೆಯಲಾಗುತ್ತದೆ ಮತ್ತು ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇಡೀ ಸಂಸಾರ ಭಾರ ಹೊರುವ ಅಪ್ಪನಿಗೆ ಗೌರವಸೂಚಕವಾಗಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.

ಇದನ್ನು ಓದಿSSLC ನಂತರ ವಿದ್ಯೆ, ಉದ್ಯೋಗದ ಬೆಳಕು!

ಅಪ್ಪನ ಗದರಿಕೆಯಲ್ಲೂ ಒಂದು ಪ್ರೀತಿ ಅಡಗಿರುತ್ತದೆ. ಅತ್ತಾಗ ಕಣ್ಣೊರೆಸುವ ಕೈಗಳೇ ಮುಂದೆ ತಪ್ಪು ಮಾಡಿದಾಗ ಶಿಕ್ಷಿಸುತ್ತದೆ. ಆ ಶಿಕ್ಷೆಯೇ ಮುಂದೆ ಹೊಸ ಅನುಭವಕ್ಕೆ ದಾರಿ ಮಾಡಿಕೊಟ್ಟಿರುತ್ತದೆ.  ಯಾರ ಮುಂದೆಯೂ ತನ್ನ ಮಕ್ಕಳು ಸೋಲಬಾರದೆಂಬ ಅಪ್ಪಟ  ಕಾಳಜಿವಹಿಸುವ ಏಕೈಕ ಜೀವ, ಅದು ಅಪ್ಪ ಮಾತ್ರ.

father

ಪ್ರತಿ ಸೋಲಿನಲ್ಲೂ ದೈರ್ಯ ತುಂಬುವ, ಎದ್ದು ನಿಲ್ಲಲೇಬೇಕೆಂದು ಹುರಿದುಂಬಿಸುವ ಆ ಬಡ ಜೀವವೇ ಅಪ್ಪ. ಅದೆಷ್ಟೊ ಜನರ ಸಾಧನೆಗೆ ಅಪ್ಪ ತೋರಿದ ಆ ಅಚಲ ನಂಬಿಕೆಯೇ ಶ್ರೀರಕ್ಷೆಯಾಗಿದೆ. ಆತನ ಆ ಗುಣವೇ ಅಪ್ಪನನ್ನು ಆಕಾಶದೆತ್ತರಕ್ಕೇರಿಸಿದೆ ಎನ್ನಬಹುದು.

ಅಪ್ಪಂದಿರ ದಿನ ಪ್ರಾರಂಭವಾದ್ದದು :

ಯುನೈಟೆಡ್​ ಸ್ಟೇಟ್​ನಲ್ಲಿ ಭೀಕರವಾದ ಅಪಘಾತವೊಂದು ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಅಮೆರಿಕದ ಅಂತರ್ಯುದ್ಧದ ಅನುಭವಿ ವಿಲಿಯಂ ಜಾಕ್ಸನ್ ಸ್ಮಾರ್ಟ್ ಅವರ ಪುತ್ರಿ ಸೊನೊರಾ ಸ್ಮಾರ್ಟ್ ಡಾಡ್ ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು.

ತಾಯಿಯನ್ನು ಕಳೆದುಕೊಂಡ 15 ವರ್ಷದ ಸೊನೊರಾ ಲೂಯಿಸ್​​ ಡಾಡ್ ತಂದೆಯ ಆಶ್ರಯದಲ್ಲಿ ಬೆಳೆದಳು. ಆಕೆಯನ್ನು ಮತ್ತು ಆಕೆಯ ತಮ್ಮನನ್ನು ತಂದೆ ಕಷ್ಟಪಟ್ಟು ಸಾಕಿದರು. ತಾಯಂದಿರ ದಿನಾಚರಣೆಯ ಬಗ್ಗೆ ಅರಿತ ಆಕೆ ಅಪ್ಪಂದಿರ ದಿನಾಚರಣೆಯನ್ನು ಮಾಡಬೇಕೆಂದು ಮೊದಲು ಪ್ರಾರಂಭಿಸಿದಳು.

ತಾಯಂದಿರ ದಿನದ ಬಗ್ಗೆ ಚರ್ಚ್ ಕೇಳುತ್ತಿರುವಾಗ ತಂದೆಗಳಿಗೆ ಮನ್ನಣೆಯ ಅಗತ್ಯವಿದೆ ಎಂದು ಸೊನೊರಾ ಭಾವಿಸಿದರು. ತನ್ನ ತಂದೆಯ ಮೇಲಿನ ಅತ್ಯಂತ ಪ್ರೀತಿ ಮತ್ತು ಗೌರವದಿಂದ, ಅವಳು ಸ್ಪೋಕೇನ್ ಮಂತ್ರಿ ಮೈತ್ರಿಕೂಟವನ್ನು ಸಂಪರ್ಕಿಸಿದಳು ಮತ್ತು ತನ್ನ ತಂದೆಯ ಜನ್ಮದಿನವಾದ ಜೂನ್ 5 ಅನ್ನು ತಂದೆಯ ದಿನವೆಂದು ಗುರುತಿಸುವಂತೆ ಕೇಳಿಕೊಂಡಳು. ಅವರು ಈ ಸಂದರ್ಭವನ್ನು ತಿಂಗಳ ಮೂರನೇ ಭಾನುವಾರದಂದು ಆಚರಿಸಲುಕೊಳ್ಳಲು ನಿರ್ಧರಿಸಿದರು.

ನಂತರದ ವರ್ಷಗಳಲ್ಲಿ, ತಂದೆಯ ದಿನವು ಜನಪ್ರಿಯವಾಯಿತು ಮತ್ತು ರಾಷ್ಟ್ರದಾದ್ಯಂತ ಆಚರಿಸಲಾಯಿತು. ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ 1966 ರಲ್ಲಿ ಅಧ್ಯಕ್ಷೀಯ ಘೋಷಣೆಗೆ ಸಹಿ ಹಾಕಿದರು. ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವೆಂದು ಆಚರಣೆಗೆ ಅಧಿಕೃತವಾಗಿ ಘೋಷಿಸಿದರು.

3ದಶಕಗಳ ನಂತರ PUC ಪರೀಕ್ಷೆ ಬರೆದು ಪಾಸ್​ ಮಾಡಿದ ಶಾಸಕ ಸಾ.ರಾ. ​​ ಪತ್ನಿ ಅನಿತಾ

ಮೈಸೂರಿನ ಕೆಆರ್ ನಗರದ ಶಾಸಕ ಸಾ.ರಾ ಮಹೇಶ್ ಪತ್ನಿ 3 ದಶಕಗಳ ನಂತರ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ಸಾ.ರಾ ಮಹೇಶ್ ಪತ್ನಿ ಅನಿತಾ 1993ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಬಳಿಕ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. ಇದೀಗ 30 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದ ಅನಿತಾ 416 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಮಾದರಿಯಾಗಿದ್ದಾಳೆ.

ನಟ ಸತೀಶ್ ಹತ್ಯೆ ಪ್ರಕರಣ: ಮಂಡ್ಯದ ಬೆಸಗರಹಳ್ಳಿಯ ಇಬ್ಬರು ಯುವಕರ ಬಂಧನ

ಬೆಂಗಳೂರಿನ ಪಟ್ಟಣಗೆರೆಯಲ್ಲಿ ನಟ ಸತೀಶ್ ವಜ್ರ ಎಂಬಾತನನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಿದಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಬೆಸಗರಹಳ್ಳಿ ಗವಿಸಿದ್ದನ ಮಗ ಸುದರ್ಶನ್ (22) ಹಾಗೂ ಕುಮಾರ್ ಮಗ ನಾಗೇಂದ್ರ (19) ಎಂಬುವವರನ್ನು ಬಂಧಿಸಲಾಗಿದೆ

ಕಳೆದ ರಾತ್ರಿ ಇವರಿಬ್ಬರು ನಟ ಸತೀಶ್ ವಾಸಿಸುತ್ತಿದ್ದ ಮನೆಗೆ ಹೋಗಿರುವ ದೃಷ್ಯದ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ

ಸತೀಶ್ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಸಾವಿಗೆ ನಟ ಸತೀಶ್ ವಜ್ರನೇ ಕಾರಣ ಎಂದು ಆಕೆಯ ಸಹೋದರನೇ ಗೆಳೆಯನ ಸಹಾಯದಿಂದ ಈ ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.

ಮೈಸೂರು ರೈಲು ನಿಲ್ದಾಣ ವಿಸ್ತರಣೆ: 395. 73 ಕೋಟಿ ರು ಯೋಜನೆಗೆ ಪ್ರಧಾನಿ ಶಂಕು ಸ್ಥಾಪನೆ

ಮೈಸೂರಿನ ಕೇಂದ್ರ ರೈಲು ನಿಲ್ದಾಣವನ್ನು 395.73 ಕೋಟಿ ರು ವೆಚ್ಚದಲ್ಲಿ ವಿಸ್ತರಣೆ ಮಾಡಲು ಯೋಜಿಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಮೈಸೂರಿನ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಮೈಸೂರಿನ ನಿಲ್ದಾಣದ ಮೇಲಿರುವ ಒತ್ತಡ ನಿವಾರಿಸಿ, ಮೇಲ್ದರ್ಜೆಗೇರಿಸಲು ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್‌ 20ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ರೈಲು ನಿಲ್ದಾಣದ ವಿಸ್ತರಣೆ ಯೋಜನೆಗೂ ಚಾಲನೆ ನೀಡಲಿದ್ದಾರೆ’ ಎಂದರು.

ಯೋಜನೆಯ ರೂಪ ರೇ಼ಷ ಹೇಗೆ ?

  • 1) ಮೈಸೂರು ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ 65 ಎಕರೆ ಜಾಗದಲ್ಲಿರುವ ಕ್ವಾರ್ಟಸ್‌ಗಳನ್ನು ನೆಲಸಮ ಮಾಡಿ ನಿಲ್ದಾಣದ ವಿಸ್ತರಣೆ ಮಾಡಲಾಗುವುದು.
  • 2) ಹೆಚ್ಚುವರಿಯಾಗಿ 3 ಫ್ಲಾಟ್‌ಫಾರ್ಮ್ ಲೈನ್, 4 ಪಿಟ್ ಲೈನ್, 4 ಸ್ಥಿರ ಲೈನ್, 1 ಶಂಟಿಂಗ್ ನೆಕ್ ನಿರ್ಮಿಸಲು ಯೋಜಿಸಲಾಗಿದೆ.
  • 3) ವಿಸ್ತೃತ ಯೋಜನಾ ವರದಿ ಸಿದ್ಧಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ
  • 4) ಮೈಸೂರಿಗೆ ಮೆಮು ರೈಲುಗಳು ಹೆಚ್ಚಾಗಿ ಬರುತ್ತಿವೆ. ಆದ್ದರಿಂದ ನಾಗನಹಳ್ಳಿಯಲ್ಲಿ 92.07 ಕೋಟಿ ರು ವೆಚ್ಚದಲ್ಲಿ ಮೆಮು ಶೆಡ್ ನಿರ್ಮಿಸಲಾಗುವುದು.
  • 5) 1 ಹೆಚ್ಚುವರಿ ಫ್ಲಾಟ್‌ಫಾರ್ಮ್, 2 ಸ್ಟೇಬ್ಲಿಂಗ್ ಲೈನ್ ನಿರ್ಮಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಮೈಸೂರಿನಿಂದ ಸಂಪರ್ಕ ಇರುವುದರಿಂದಾಗಿ ಭವಿಷ್ಯದಲ್ಲಿ ನಾಗನಹಳ್ಳಿಯಲ್ಲಿ ಟರ್ಮಿನಲ್ ಅಭಿವೃದ್ಧಿಪಡಿಸಲಾಗುತ್ತದೆ.
  • 6) ಅಶೋಕಪುರಂನಲ್ಲಿ 2 ಫ್ಲಾಟ್‌ಫಾರ್ಮ್, ಫುಟ್‌ಓವರ್ ಬ್ರಿಡ್ಜ್ ನಿರ್ಮಿಸಲಾಗುವುದು
  • 7) ಬೆಂಗಳೂರು-ಮೈಸೂರು ದಶಪಥ ರಸ್ತೆ, ನಾಗನಹಳ್ಳಿ ರೈಲ್ವೆ ಟರ್ಮಿನಲ್ ನಿರ್ಮಾಣದ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಡಿದ್ದರು. ಭೂಸ್ವಾಧೀನ ವಿಳಂಬದ ಹಿನ್ನೆಲೆಯಲ್ಲಿ ನಾಗನಹಳ್ಳಿ ಟರ್ಮಿನಲ್ ನಿರ್ಮಾಣ ಸಾಧ್ಯವಾಗಿಲ್ಲ

ಸುದ್ದಿಗೋಷ್ಠಿಯಲ್ಲಿ ಡಿಆರ್‌ಎಂ ರಾಹುಲ್ ಅಗರ್‌ವಾಲ್‌, ಎಸ್‌ಡಿಆರ್‌ಎಂ ಮಂಜುನಾಥ್, ರವಿಚಂದ್ರ ಇದ್ದರು.

error: Content is protected !!