March 31, 2023

Newsnap Kannada

The World at your finger tips!

ramkrishn rao

ಕನ್ನಡದ ವಿಜ್ಞಾನ ಲೇಖಕ, ಚಿಂತಕ ಎಚ್.ಆರ್. ರಾಮಕೃಷ್ಣ ರಾವ್ ಇನ್ನಿಲ್ಲ

Spread the love

ಕನ್ನಡದ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಡಾ.ರಾಮಕೃಷ್ಣರಾವ್(87) ವಯೋಸಹಜ ಕಾಯಿಲೆಯಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೇ ​ ನಿಧನರಾದರು.

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಹಿರಿಯ ವಿಜ್ಞಾನಿಗಳಾದ, ಡಾ.ರಾಜಾರಾಮಣ್ಣ, ಡಾ. ಸಿ. ಎನ್. ಆರ್. ರಾವ್ ಡಾ.ಯು. ಆರ್. ರಾವ್, ಡಾ.ಎಮ್.ಆರ್ ಶ್ರೀನಿವಾಸನ್ ಮುಂತಾದವರ ಜೊತೆ ದೂರದರ್ಶನದಲ್ಲಿ ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ ಬೆಂಗಳೂರು ನಗರದ ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬೆಂಗಳೂರು ಆಕಾಶವಾಣಿಯನ್ನು ಬಳಸಿಕೊಂಡು ವಿಜ್ಞಾನ ಪ್ರಸಾರದಲ್ಲಿ ಖಗೋಳಶಾಸ್ತ್ರ,ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ ನಕ್ಷತ್ರ ವೀಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಟ್ಟ ಪ್ರಮುಖರಲ್ಲೊಬ್ಬರು.

ವಿಶ್ವವಿದ್ಯಾಲಯಗಳಲ್ಲಿ ‘ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ ವಿಜ್ಞಾನ ಲೇಖನಗಳ ಪರಿಶೋಧಕ’ರಾಗಿಯೂ ಸೇವೆಸಲ್ಲಿಸಿದ್ದಾರೆ.

error: Content is protected !!