September 27, 2022

Newsnap Kannada

The World at your finger tips!

4 lakh

4 ಲಕ್ಷ ರು ಲಂಚ ಪಡೆದ BBMP ಅಧಿಕಾರಿ, ಪಿಎ ಬಂಧನ – ಲೋಕಾಯುಕ್ತರ ಮೊದಲ ಬಲಿಗೆ ಬಿದ್ದ ತಿಮಿಂಗಲು

Spread the love

ಖಾತೆ ಮಾಡಿಕೊಡಲು 4 ಲಕ್ಷ ರು ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಪಶ್ಚಿಮ ವಿಭಾಗದ BBMP ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಪಿಎ ಉಮೇಶ್‌ನನ್ನು ಲೋಕಾಯುಕ್ತ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್‌ಪಿ ಮಂಜಯ್ಯ, ಶಂಕರ್ ನಾರಾಯಣ್, ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದ ಲೋಕಾಯುಕ್ತ ಟೀಂ ಮಲ್ಲೇಶ್ವರಂನಲ್ಲಿರುವ ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿ, ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಜುನಾಥ್ ಎಂಬವರ ದೂರಿನ ಮೇರೆಗೆ ಖಾತೆ ಬದಲಾವಣೆ ವಿಚಾರದಲ್ಲಿ 4 ಲಕ್ಷ ರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಇದನ್ನು ಓದಿ : ನಟ ರಮೇಶ್ ಅರವಿಂದ್ ಸೇರಿ ಮೂವರು ಗಣ್ಯರಿಗೆ ರಾಣಿ ಚನ್ನಮ್ಮ ವಿ ವಿಯಿಂದ ಗೌರವ ಡಾಕ್ಟರೇಟ್

4 ಲಕ್ಷ ಹಣದ ಸಮೇತ ನಿಂತಿದ್ದ ಶ್ರೀನಿವಾಸ್ ಪಿಎ ಉಮೇಶ್ ಹಾಗೂ ಶ್ರೀನಿವಾಸ್‌ರನ್ನ ಬಂಧಿಸಿ, ಕಚೇರಿಯಲ್ಲೇ ವಿಚಾರಣೆ ನಡೆಸಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

error: Content is protected !!