ಮಂಡ್ಯದ ಮುಡಾ ಸೈಟ್ ಹಗರಣ – ಇಬ್ಬರು ಹಾಲಿ, ಓರ್ವ ಮಾಜಿ ಶಾಸಕರಿಗೆ ಸಂಕಷ್ಟ ? – ರಾಜಕೀಯ ಭವಿಷ್ಯದ ಮೇಲೆ ಕರಿನೆರಳು

Team Newsnap
2 Min Read

ಮಂಡ್ಯ ಮುಡಾದಲ್ಲಿ ನಡೆದಿದ್ದ ಐದು ಕೋಟಿ ಹಣ ದುರುಪಯೋಗ ಹಗರಣಕ್ಕೆ ಸಂಬಂಧ ಐದು ಮಂದಿಗೆ 7 ವರ್ಷ ಜೈಲಾಗಿರುವ ಬೆನ್ನಲೇ ಮತ್ತೊಂದು ಮುಡಾದ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಾಲಿ ಶಾಸಕರು, ಓರ್ವ ಮಾಜಿ ಶಾಸಕ ಸೇರಿದಂತೆ 24 ಮಂದಿಯ ಎದೆಯಲ್ಲಿ ನಡುಕ ಶುರವಾಗಿದೆ.

ಸಿಬಿಐ ಕೋರ್ಟ್‌ನಲ್ಲಿ ವ್ಯತಿರಿಕ್ತವಾಗಿ ತೀರ್ಪು ಬಂದರೆ ಮೂವರು ಪ್ರಮುಖ ರಾಜಕಾರಿಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಳ್ಳುವ ಜೊತೆಗೆ ರಾಜಕೀಯ ಜೀವನಕ್ಕೆ ಕಂಟಕ ಎದುರಾಗಲಿದೆ ಎಂದು ಹೇಳಲಾಗಿದೆ.

ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದಿಂದ 2009 ರಲ್ಲಿ ನಿವೇಶನ ಹಂಚಿಕೆಯಾಗಿತ್ತು. ಅಂದಿನ ಮುಡಾ ಅಧ್ಯಕ್ಷರಾದ ವಿದ್ಯಾನಾಗೇಂದ್ರ ಸೇರಿದಂತೆ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು , ಮಾಜಿ ಶಾಸಕ ರಮೇಶ್ ಬಂಡೀಸಿದ್ದೇಗೌಡ ಸೇರಿದಂತೆ ಮುಡಾ ಆಡಳಿತ ಮಂಡಳಿ ಸದಸ್ಯರು 107 ಮೂಡಾ ನಿವೇಶನಗಳನ್ನು ತಮ್ಮ ಕುಟುಂಬದವರಿಗೆ ಹಾಗೂ ಅತ್ಯಾಪ್ತರಿಗೆ ನಿಯಮ ಮೀರಿ ಹಂಚಿಕೆ ಮಾಡಿದ್ದರು ಎಂಬ ಆರೋಪ ಇತ್ತು

ಆ ಹಿನ್ನಲೆ 2010 ರಲ್ಲಿ ಮಂಡ್ಯದ ವಕೀಲ ಸತ್ಯಾನಂದ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಬಳಿಕ 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂಡಾ ಹಗರಣವನ್ನು ಸಿಬಿಐಗೆ ವಹಿಸಿತ್ತು. ಬಳಿಕ ಸುದೀರ್ಘ ತನಿಖೆ ನಡೆಸಿದ ಸಿಬಿಐ 24 ಆರೋಪಿಗಳ ಮೇಲೆ 7,000 ಸಾವಿರ ಪುಟಗಳಷ್ಟು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ಆದರೆ ತಮ್ಮ ಮೇಲಿನ ಪ್ರಕರಣವನ್ನು ವಜಾಗೊಳಿಸುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ 2022 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಮಧ್ಯಪ್ರವೇಶಕ್ಕೆ ನಿರಾಕರಣೆ ಮಾಡಿತ್ತು. ಆದ್ದರಿಂದ ಸಿಬಿಐ ನ್ಯಾಯಾಲಯವೇ ಇದನ್ನು ವಿಚಾರಣೆ ಕೈಗೆತ್ತಿಕೊಂಡಿದೆ.

ಮುಡಾದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಪುಟ್ಟರಾಜು, ಎಂ.ಶ್ರೀನಿವಾಸ್ ಹಾಗೂ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ಆತಂಕ ಶುರುವಾಗಿದೆ. ಇದನ್ನು ಓದಿ : 4 ಲಕ್ಷ ರು ಲಂಚ ಪಡೆದ BBMP ಅಧಿಕಾರಿ, ಪಿಎ ಬಂಧನ – ಲೋಕಾಯುಕ್ತರ ಮೊದಲ ಬಲಿಗೆ ಬಿದ್ದ ತಿಮಿಂಗಲು

ಸಿಬಿಐ ತನಿಖೆಯ ಆಧಾರದ ಮೇಲೆ ಜನಪ್ರತಿನಿಧಿಗಳ ನ್ಯಾಯಾಲಯ ವ್ಯತಿರಿಕ್ತವಾದ ತೀರ್ಪು ನೀಡಿದರೆ, ಈ ಮೂವರ ರಾಜಕೀಯ ಭವಿಷ್ಯಕ್ಕೆ ಕತ್ತಲೆಯ ಕರಿ ನೆರಳು ಬೀಳಲಿದೆ . ಮಂಡ್ಯ ಜಿಲ್ಲೆಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ.

Share This Article
Leave a comment