July 7, 2022

Newsnap Kannada

The World at your finger tips!

Gujarat Titans

ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್; ಮಿಂಚಿನ ಪ್ರದರ್ಶನ ನೀಡಿದ ಹಾರ್ದಿಕ್

Spread the love

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ರಾಜಸ್ಥಾನ್ (RR) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಐಪಿಎಲ್ 2022 ಅನ್ನು ತಮ್ಮ ಮೊದಲ ಋತುವಿನಲ್ಲಿ ಗೆದ್ದುಕೊಂಡಿತು. GT ತನ್ನ 20 ಓವರ್‌ಗಳಲ್ಲಿ RR ಅನ್ನು 130/9 ಗೆ ನಿರ್ಬಂಧಿಸಿತು ಮತ್ತು 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. 2008 ರಲ್ಲಿ IPL ಗೆದ್ದಿದ್ದ . RR, ಎರಡನೇ ಫೈನಲ್‌ನಲ್ಲಿ ಕಾಣಿಸಿಕೊಂಡಿತ್ತು.

ಫೈನಲ್ ಪಂದ್ಯದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾದರು. ಆದರೆ ಈ ಆಟ ಹೆಚ್ಚು ಹೊತ್ತು ನಡೆಯಲಿಲ್ಲ.

  • ಜೈಸ್ವಾಲ್ 22 (16)
  • ಬಟ್ಲರ್ 39 (35)
  • ರಿಯಾನ್ ಪರಾಗ್ 15 (15)
gujarat taitans

ಗೆಲ್ಲಲು 131 ರನ್‍ಗಳ ಅಲ್ಪ ಮೊತ್ತದ ಗುರಿ ಪಡೆದ ಗುಜರಾತ್ ತಂಡ

ಆರಂಭದಲ್ಲಿ ಸಣ್ಣ ಮೊತ್ತವನ್ನು ಬೆನ್ನಟ್ಟುವ ವೇಳೆ ವೃದ್ಧಿಮಾನ್ ಸಹಾ 5 ರನ್ ಮತ್ತು ವೇಡ್ 8 ರನ್ ಸಿಡಿಸಿ ಬೇಗನೆ ವಿಕೆಟ್ ಕಳೆದುಕೊಂಡರು. ಆ ಬಳಿಕ ಗುಜರಾತ್ ತಂಡಕ್ಕೆ ಗಿಲ್ ಮತ್ತು ಪಾಂಡ್ಯ ನೆರವಾದರು. ಈ ಜೋಡಿ 3 ನೇ ವಿಕೆಟ್‍ಗೆ 63 ರನ್ (53 ಎಸೆತ) ಜೊತೆಯಾಟವಾಡಿದ್ದು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು.

  • ಹಾರ್ದಿಕ್ ಪಾಂಡ್ಯ 34 (30)
  • ಶುಭಮನ್ ಗಿಲ್ ಅಜೇಯ 45 (43) .
  • ಡೇವಿಡ್ ಮಿಲ್ಲರ್* 32 (19)

ಈ ಸೋಲಿನೊಂದಿಗೆ 14 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ರಾಜಸ್ಥಾನ ತಂಡಕ್ಕೆ ನಿರಾಸೆಯಾಗಿದೆ.

ಇದನ್ನು ಓದಿ : KPCCಗೆ ನೂತನ ಉಪಾಧ್ಯಕ್ಷರು, ಕಾರ್ಯದರ್ಶಿಗಳ ನೇಮಕ

ಪಾಂಡ್ಯ ದಾಳಿ:
ರಾಜಸ್ಥಾನ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ಗಳು ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ದಾಳಿಗೆ ಬೆದರಿದರು. ರಾಜಸ್ಥಾನ ತಂಡದ ಅಗ್ರ ಕ್ರಮಾಂಕದ ಆಟಗಾರರಾದ ಬಟ್ಲರ್, ಶಿಮ್ರಾನ್ ಹೆಟ್ಮೆಯರ್ ವಿಕೆಟ್ ಕಿತ್ತು ಪಾಂಡ್ಯ ರಾಜಸ್ಥಾನಕ್ಕೆ ಕಾಡಿದರು.

pandya

ಗುಜರಾತ್ ಪರ ಪಾಂಡ್ಯ 3 ವಿಕೆಟ್ ಕಿತ್ತು ಮಿಂಚಿದರೆ, ಸಾಯಿ ಕಿಶೋರ್ 2 ವಿಕೆಟ್ ಪಡೆದರು. ಉಳಿದಂತೆ ಶಮಿ, ಯಶ್ ದಯಾಲ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಕ್ರೀಡಾಂಗಣದಲ್ಲಿ ದಾಖಲೆ –

ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ 1,04, 859 ಮಂದಿ ಪ್ರೇಕ್ಷಕರು ಪಂಧ್ಯ ವೀಕ್ಷಿಸಿದ್ದು ದಾಖಲೆ ಸಂಗತಿಯಾಗಿದೆ

error: Content is protected !!