ರಾಜ್ಯಸಭೆಗೆ ಟಿಕೆಟ್ ಸಿಕ್ಕಿರುವುದು ರಾಯರ ಕೃಪೆ, ಪವಾಡ – ಜಗ್ಗೇಶ್

Team Newsnap
1 Min Read

ರಾಜ್ಯಸಬಾ ಚುನಾವಣೆಗೆ ಸ್ಪರ್ಧಿಸಲು ನವರಸ ನಾಯಕ ನಟ ಜಗ್ಗೇಶ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿರುವುದು ರಾಯರ ಕೃಪೆ, ಅವರ ಪವಾಡಕ್ಕೆ ಧನ್ಯ ಎಂದು ಜಗ್ಗೇಶ್ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್ , ಆತ್ಮೀಯ ಕನ್ನಡದ ಬಂಧುಗಳೆ 42 ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆ ಮಾಡಿ ಕಾಯವಾಚಮನ ಸತ್ಯಮಾರ್ಗದಲ್ಲಿ ಬದುಕಿದ್ದೇನೆ. ನನ್ನ ನೆಚ್ಚಿನ ಭಾಜಪ, ರಾಜ್ಯದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕಮಿತ್ರರು ಹಾಗೂ ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ. ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಬರೆದುಕೊಂಡಿದ್ದಾರೆ.

ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ.

ಇದನ್ನು ಓದಿ – ನವರಸ ನಾಯಕ ಜಗ್ಗೇಶ್ ಗೆ ರಾಜ್ಯಸಭೆ ಟಿಕೆಟ್ – ಬಿಜೆಪಿಯ ಮತ್ತೊಂದು ಅಚ್ಚರಿ

ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕರ್ನಾಟಕದಿಂದಲೇ ಮುಂದುವರಿಸಲು ನಿರ್ಧರಿಸಿದ್ದು, ಕೆ.ಸಿ ರಾಮಮೂರ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಟ ಜಗ್ಗೇಶ್‍ಗೆ ಅವಕಾಶ ನೀಡಿದೆ.

ನಟ ಜಗ್ಗೇಶ್ ಟಿಕೆಟ್ ನೀಡುವ ಮೂಲಕ ಯಶವಂತಪುರ ಕ್ಷೇತ್ರದಲ್ಲಿ ಒತ್ತಡ ಕಡಿಮೆ ಮಾಡಿದ್ದು, ಎಸ್.ಟಿ ಸೋಮಶೇಖರ್ ರಿಲೀಫ್ ನೀಡುವ ಕೆಲಸ ಹೈಕಮಾಂಡ್ ಮಾಡಿದೆ. ಜೆಡಿಎಸ್ ಜೊತೆಗೆ ಮಾತುಕತೆ ಅಂತ್ಯವಾಗದ ಹಿನ್ನೆಲೆ ಮೂರನೇ ಅಭ್ಯರ್ಥಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ಹೆಸರು ಮುನ್ನೆಲೆಯಲ್ಲಿದ್ದು ಅವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನಲೆ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮಣೆ ಹಾಕಿದೆ.

Share This Article
Leave a comment