July 7, 2022

Newsnap Kannada

The World at your finger tips!

WhatsApp Image 2022 05 29 at 7.55.15 PM

ನವರಸ ನಾಯಕ ಜಗ್ಗೇಶ್ ಗೆ ರಾಜ್ಯಸಭೆ ಟಿಕೆಟ್ – ಬಿಜೆಪಿಯ ಮತ್ತೊಂದು ಅಚ್ಚರಿ

Spread the love

ರಾಜ್ಯಸಭೆಗೆ ಕರ್ನಾಟಕದಿಂದ ಬಿಜೆಪಿ ಹೈ ಕಮ್ಯಾಂಡ್ ಅಚ್ಚರಿ ಅಭ್ಯರ್ಥಿ ನಟ ಜಗ್ಗೇಶ್ ಅವರನ್ನು ಕಣಕ್ಕೆ ಇಳಿಸಿದೆ. ಕರ್ನಾಟಕದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಮತ್ತು ಕನ್ನಡದ ನಟ ನವರಸ ನಾಯಕ ಜಗ್ಗೇಶ್​ ಅವರಿಗೆ ರಾಜ್ಯಸಭಾ ಟಿಕೆಟ್​ ನೀಡಲಾಗಿದೆ.

WhatsApp Image 2022 05 29 at 7.54.40 PM

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿ ಇರುವಾಗಲೇ ಭಾರತೀಯ ಜನತಾ ಪಾರ್ಟಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಜಗ್ಗೇಶ್​ ಅವರನ್ನು ರಾಜ್ಯಸಭೆಯ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು ಎನ್ನಲಾಗಿದೆ.

ಇದನ್ನು ಓದಿ : ಪಂಜಾಬಿ ಜನಪ್ರಿಯ ಗಾಯಕ ಸಿಧೂ ಮೂಸ್ ವಾಲಾ ಗುಂಡೇಟಿನಿಂದ ಹತ್ಯೆ

ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯ ವಿಧಾನ ಸಭೆಯಲ್ಲಿ ಪಕ್ಷಗಳ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಇಬ್ಬರು ಹಾಗೂ ಕಾಂಗ್ರೆಸ್‌ನಿಂದ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ.

error: Content is protected !!