ನವೆಂಬರ್ 1ರಂದು JDS ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಕುಮಾರಸ್ವಾಮಿ

Team Newsnap
1 Min Read

2023ರ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ಗಿಂತ ಮೊದಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ.

ನ. 1ರಂದು ಮುಳಬಾಗಿಲಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಜೆಡಿಎಸ್‌ನ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.ಬಸವಲಿಂಗ ಸ್ವಾಮಿ ಮಹಿಳೆ ಜೊತೆ ಮೊಬೈಲ್ ನಲ್ಲಿ ನಿರಂತರ ಚಾಟ್ : ಅಶ್ಲೀಲ ವಿಡಿಯೋ ಕೂಡ ಬಹಿರಂಗ ?

ಜೆಪಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ H D K , ಈಗಾಗಲೇ 123 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫೈನಲ್ ಆಗಿದೆ. ಕಳೆದ ವಾರ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಸಲ್ಲಿಸಲಾಗಿದೆ. ಪಂಚರತ್ನ ಕಾರ್ಯಕ್ರಮದ ಮೊದಲ ದಿನ ಮುಳಬಾಗಿಲಿನಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ – ಬಿಜೆಪಿಗಿಂತ ನಮ್ಮ ಪಂಚರತ್ನ ರಥಯಾತ್ರೆ ವಿಶೇಷವಾಗಿ ಇರಲಿದೆ. ಜನರ ಕಷ್ಟಗಳ ಪರಿಹಾರಕ್ಕೆ ಬಿಜೆಪಿ-ಕಾಂಗ್ರೆಸ್ ಯಾವುದೇ ಕೆಲಸ ಮಾಡಿಲ್ಲ. ಈಗ ಪಾದಯಾತ್ರೆ, ಸಂಕಲ್ಪ ಯಾತ್ರೆ ಅಂತಿದ್ದಾರೆ. ಆದರೆ ನಾವು ಪಂಚರತ್ನ ಕಾರ್ಯಕ್ರಮದಲ್ಲಿ ನಮಗೆ ಅಧಿಕಾರ ಕೊಟ್ಟರೆ ಹೇಗೆ? ಅದನ್ನು ಅನುಷ್ಠಾನ ಮಾಡ್ತೀವಿ ಅಂತ ಜನರ ಮುಂದೆ ಹೇಳಿ, ಒಂದು ಅವಕಾಶ‌ ಕೊಡಿ ಅಂತ ಮನವಿ ಮಾಡ್ತೀವಿ ಎಂದರು.

ನವೆಂಬರ್ 1ರಿಂದ ಮೊದಲ ಹಂತದ ಪಂಚರತ್ನ ರಥಯಾತ್ರೆ ನಡೆಯಲಿದೆ. ಸುಮಾರು 36 ಕ್ಷೇತ್ರಗಳಲ್ಲಿ‌‌ ಮೊದಲ ಹಂತದ ಯಾತ್ರೆ ನಡೆಯಲಿದೆ ಎಂದು ಕುಮಾರಸ್ವಾಮಿ ‌ಮಾಹಿತಿ ನೀಡಿದರು.

Share This Article
Leave a comment