ಬಸವಲಿಂಗ ಸ್ವಾಮಿ ಮಹಿಳೆ ಜೊತೆ ಮೊಬೈಲ್ ನಲ್ಲಿ ನಿರಂತರ ಚಾಟ್ : ಅಶ್ಲೀಲ ವಿಡಿಯೋ ಕೂಡ ಬಹಿರಂಗ ?

Team Newsnap
1 Min Read
Basavalinga Swami continuous chat on mobile with woman: Obscene video also exposed? ಬಸವಲಿಂಗ ಸ್ವಾಮಿ ಮಹಿಳೆ ಜೊತೆ ಮೊಬೈಲ್ ನಲ್ಲಿ ನಿರಂತರ ಚಾಟ್ : ಅಶ್ಲೀಲ ವಿಡಿಯೋ ಕೂಡ ಬಹಿರಂಗ ?

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮಿ ಆತ್ಮಹತ್ಯೆಗೆ ಮತ್ತೆ ಟ್ವಿಸ್ಟ್ ಸಿಕ್ಕಿದೆ . ಸ್ವಾಮೀಜಿ ಮಹಿಳೆಯೊಂದಿಗೆ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿದ್ದ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವಾಮಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 2 ಪುಟಗಳ ಡೆತ್ ನೋಟ್ ಕೂಡಾ ಬರೆದಿದ್ದಾರೆ ಅದರಲ್ಲೂ ಹಲವರ ಹೆಸರನ್ನು ಬರೆದಿದ್ದು. ಆದರೆ ಪ್ರಕರಣಕ್ಕೆ ಸಂಬಂಧಿಸಿ ಕುದೂರು ಪೊಲೀಸರು ಅನಾಮಧೇಯನ ಹೆಸರಿನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.ಬಲಿಪಾಡ್ಯಮಿ – ದಾನವ ಅರಸ ಬಲೀಂದ್ರನ ಪೂಜೆ

ಸ್ವಾಮಿ ನೇಣಿಗೆ ಶರಣಾಗುವ ಮುನ್ನ ಇಬ್ಬರು ವ್ಯಕ್ತಿಗಳು ಭೇಟಿ ಆಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಆದರೆ ದಿನ ಸುಮಾರು ಅರ್ಧಗಂಟೆಗೂ ಹೆಚ್ವು ಕಾಲ ಸ್ವಾಮಿಗಳ ಜೊತೆ ಗೌಪ್ಯ ಮಾತುಕತೆ ನಡೆದಿತ್ತು. ಅವರಿಬ್ಬರ ಭೇಟಿ ಬಳಿಕ ಸ್ವಾಮಿ ವಿಚಲಿತರಾಗಿದ್ದರು.

ಸ್ವಾಮಿಯನ್ನು ಹನಿಟ್ರ್ಯಾಪ್ ಮಾಡಲಾಗಿತ್ತು ಎಂಬ ವಿಷಯ ಹರಡಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಸ್ವಾಮೀಜಿ ಡೆತ್‍ನೋಟ್‍ನಲ್ಲೂ ತಿಳಿಸಿದ್ದರು. ಇದೀಗ ಅದೆಲ್ಲದಕ್ಕೂ ಪುಷ್ಠಿ ನೀಡುವ ಸಾಕ್ಷ್ಯ ದೊರೆತ್ತಿದ್ದು, ಸ್ವಾಮೀಜಿ, ಮಹಿಳೆ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತುಕತೆ ನಡೆಸುತ್ತಿದ್ದ ವೀಡಿಯೋವೊಂದು ವೈರಲ್ ಆಗುತ್ತಿದೆ.

ಅಷ್ಟೇ ಅಲ್ಲದೇ ಕಳೆದ 6 ತಿಂಗಳಿಂದ ಆ ಮಹಿಳೆಯ ಸಂಪರ್ಕದಲ್ಲಿ ಸ್ವಾಮೀಜಿ ಇದ್ದರು. ಹಾಗೂ ಗೊತ್ತಿಲ್ಲದ ಮಹಿಳೆ ಜೊತೆ ಸ್ವಾಮಿಗಳು ಚಾಟಿಂಗ್ ಮಾಡುತ್ತಿದ್ದರು ಎಂಬ ವಿಷಯ ಬಯಲಾಗಿದೆ.

Share This Article
Leave a comment