ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬಿ ವೈ ವಿಜಯೇಂದ್ರ ಹೆಸರಿನಲ್ಲಿ ಶ್ವೇತ ಅಶ್ವ ಪೂಜೆ

Team Newsnap
1 Min Read
Shweta Ashwa pooje in the name of B Y Vijayendra by BJP workers in Mandya ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬಿ ವೈ ವಿಜಯೇಂದ್ರ ಹೆಸರಿನಲ್ಲಿ ಶ್ವೇತ ಅಶ್ವ ಪೂಜೆ

ಕರ್ನಾಟಕದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಮುಂದಾಳತ್ವ ನೀಡಿ ವಿಜಯೇಂದ್ರ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಶ್ವೇತ ಅಶ್ವ ಕುದುರೆ ಪೂಜೆ ಮಾಡಿದ್ದಾರೆ.

ಮಂಡ್ಯದ ಕಾಳಿಕಾಂಭ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಕುದುರೆಯನ್ನು ತಂದು ಆ ಕುದುರೆಗೆ ಅಶ್ವಮೇಧ ಪೂಜೆ ಮಾಡಿಸಿದ್ದಾರೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಅಶ್ವಮೇಧ ಯಾಗದ ಸಾರಥ್ಯ ವಹಿಸಿದ್ದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಲ್ಲಿ ವಿಜಯೇಂದ್ರಗೆ ಸಾರಥ್ಯ ನೀಡಬೇಕು.

ವಿಜಯೇಂದ್ರಗೆ ಸಾರಥ್ಯ ನೀಡಿದ್ರೆ ಈ ಅಶ್ವಮೇಧ ಯಾಗವನ್ನು ಯಾರು ತಡೆಯಲು ಆಗಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ.ನವೆಂಬರ್ 1ರಂದು JDS ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಕುಮಾರಸ್ವಾಮಿ

ಚುನಾವಣೆಯೆಂಬ ಅಶ್ವಮೇಧ ಯಾಗದಲ್ಲಿ ವಿಜಯೇಂದ್ರ ಜಯಗಳಿಸುವುದು ನಿಶ್ಚಿತ. ಹೀಗಾಗಿ ವಿಜಯೇಂದ್ರ ಅವರನ್ನು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕೆಂದು ವಿಶೇಷ ಪೂಜೆ ಸಲ್ಲಿಸಿದರು.

ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಹೈಕಮಾಂಡ್‍ಗೆ ಸಹ ಮನವಿ ಮಾಡುವುದಾಗಿಯೂ ಹೇಳಿದರು.

Share This Article
Leave a comment