ನಕಲಿ ಓಟರ್ ಐಡಿ, ಆಧಾರ್ ಕಾರ್ಡ್ ತಯಾರಿಕೆ – ಮಂಡ್ಯದಲ್ಲಿ ದಂಪತಿಗಳ ಬಂಧನ

Team Newsnap
1 Min Read

ಮಂಡ್ಯದಲ್ಲಿ ಸಾವಿರಾರು ನಕಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಮಾರ್ಕ್ಸ್ ಕಾರ್ಡ್ ಮಾಡಿಕೊಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ತೌಸಿಫ್ ಉ. ದಡಕನ್ ಹಾಗೂ ಪತ್ನಿ ಹೀನಾ ಕೌಸರ್ ಅವರನ್ನು ಸೆಂಟ್ರಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಹೊಳಲು ರಸ್ತೆಯಲ್ಲಿ ಡಿ.ಕೆ.ಎಚ್. ಅಸೋಸಿಯೇಟ್ಸ್ ಹೆಸರಿನಲ್ಲಿ ಸಿಎಸ್‌ಐ ಸಲಹಾ ಕೇಂದ್ರ ನಡೆಸುತ್ತಿದ್ದ ತೌಸಿಫ್ ಮತ್ತು ಹೀನಾ ಕೌಸರ್ ಅವರು ನಕಲಿ ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಗಳನ್ನು ಮಾಡಿಕೊಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ.

ಬೆಂಗಳೂರಿನ ಮಾದೇಶ್ವರ ನಗರದ ಸ್ವಪ್ನ ಕೋಂ ಅಪ್ಪಿ ಎಂಬವರು ಕಳೆದ ಆ. 24 ರಂದು ಡಿ.ಕೆ.ಎಚ್. ಅಸೋಸಿಯೇಟ್ಸ್ ನ ಲ್ಲಿ ನಕಲಿ ಮತದಾರರ ಚೀಟಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.

ಆದರೆ ಸಾಕ್ಷ್ಯಿಗಳ ಸಮೇತ ತಹಸಿಲ್ದಾರ್ ಚಂದ್ರಶೇಖರ್ ಶಂ. ಗಾಳಿ ಅವರಿಗೆ ದೂರು ನೀಡಲಾಗಿ, ತಮ್ಮ ಸಿಬ್ಬಂದಿಯೊಂದಿಗೆ ಡಿ.ಕೆ.ಎಚ್. ಅಸೋಸಿಯೇಟ್ಸ್ ಗೆ ತೆರಳಿ ಪರಿಶೀಲಿಸಿ, ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದರು.

ಬುಧವಾರ ಸೆಂಟ್ರಲ್ ಠಾಣೆ ಪೊಲೀಸರು ಆರೋಪಿ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.

Share This Article
Leave a comment