ಶ್ರೀರಂಗಪಟ್ಟಣ ದಸರಾ ವೇಳೆ ಪಟಾಕಿ ಶಬ್ದಕ್ಕೆ ಬೆದರಿದ ಆನೆ ; ಚಲ್ಲಾಪಿಲ್ಲಿಯಾಗಿ ಓಡಿದ ಜನ

Team Newsnap
1 Min Read

ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ಪಟಾಕಿ ಶಬ್ದಕ್ಕೆ ಚಾಮುಂಡೇಶ್ವರಿ ಪ್ರತಿಮೆ ಹೊತ್ತು ಸಾಗುತ್ತಿದ್ದ ವೇಳೆ ಗೋಪಾಲಸ್ವಾಮಿ ಎಂಬ ಆನೆ ಬೆದರಿದ ಪರಿಣಾಮವಾಗಿ ಜನರು ಜೀವ ಉಳಿಸಿಕೊಳ್ಳಲು ಜನರು ಚೆಲ್ಲಾಪಿಲ್ಲಿಯಾದ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.

pattana dasara

ಶ್ರೀರಂಗಪಟ್ಟಣ ಬನ್ನಿಮಂಟಪದ ನಾಡ ದೇವಿಗೆ ಪುಷ್ಪಾರ್ಚನೆ ಆದ ಬಳಿಕ ಆನೆ ಬೆದರಿದೆ ಇದರಿಂದ ಜನ ಚೆಲ್ಲಾಪಿಲ್ಲಿಯಾದರು, ವಾದ್ಯ ಧ್ವನಿವರ್ಧಕಗಳನ್ನು ಬಂದ್ ಮಾಡಲಾಯಿತು, ಬಳಿಕ ಆನೆ ಸಮಾಧಾನಗೊಂಡಿದೆ.

ಆನೆ ಬೆದರಿದ ಹಿನ್ನಲೆಯಲ್ಲಿ ಜಂಬೂಸವಾರಿಯನ್ನು ಸ್ಥಗಿತಗೊಳಿಸಲಾಯಿತು,ನಂತರ ಆನೆ ಮೇಲೆ ಇದ್ದ ಮರದ ಅಂಬಾರಿಯನ್ನ ಕಳಚಿಟ್ಟಿದ್ದಾರೆ,ಗೋಪಾಲಸ್ವಾಮಿ ಆನೆಗೆ ಕಾಲಿಗೆ ಸರಪಳಿ ಹಾಕಲಾಗಿದೆ.


ಇತ್ತಿಚೆಗೆ ಮೈಸೂರಿನಲ್ಲಿ ಪಟಾಕಿ ಹಾಗೂ ಫಿರಂಗಿ ತಾಲೀಮು ವೇಳೆಯಲ್ಲೂ ಗೋಪಾಲಸ್ವಾಮಿ ಆನೆ ಹೆದರಿತ್ತು.

ಆನೆ ವೈದ್ಯ ರಮೇಶ್, ಪಶು ವೈದ್ಯ ಸಹಾಯಕ ಅಕ್ರಂ, ಮಾವುತರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
ಜಿಲ್ಲಾಡಳಿತದ ನಿರ್ಲಕ್ಷ್ಯತೆ, ಜನರನ್ನುನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲ.
ಪೊಲೀಸ್ ವೈಫಲ್ಯಕ್ಕೆ ಮೊಟಕುಗೊಂಡ ಜಂಬೂ ಸವಾರಿ.

Share This Article
Leave a comment