ಶ್ರೀರಂಗಪಟ್ಟಣ ದಸರೆಯಲ್ಲಿ ಆನೆ ಬೆದರಿದ ದೃಶ್ಯ : ಜನರು ದಿಕ್ಕಾಪಲು ಆಗಿದ್ದು ಹೇಗೆ?

Team Newsnap
1 Min Read

ಚುಂಚನಗಿರಿ ಶ್ರೀಗಳಿಂದ ವಿದ್ಯುಕ್ತ ಚಾಲನೆ

ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಟಾರ್ಚನೆ ಮೂಲಕ ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿರಿಂದ ಚಾಲನೆ ನೀಡಿದರು.

ಚುಂಚಶ್ರೀ ಜೊತೆ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ, ಭಾನುಪ್ರಕಾಶ್ ಶರ್ಮ ಅವರು ಸೇರಿದಂತೆ ಅಧಿಕಾರಿಗಳಿಂದಲೂ ಪುಷ್ಟಾರ್ಚನೆ. ಶ್ರೀರಂಗಪಟ್ಟಣದ ಬನ್ನಿ ಮಂಟಪದಿಂದ ಜಂಬೂ ಸವಾರಿ ಆರಂಭ.

ಶುಭ ಕುಂಭ ಲಗ್ನದಲ್ಲಿ ಆರಂಭವಾದ ಜಂಬೂ ಸವಾರಿ. ಬನ್ನಿ ಮರಕ್ಕೆ ಪೂಜೆ ಸೇರಿದಂತೆ ವಿವಿಧ ಕೈಂಕರ್ಯ. ಪೂಜಾ ಕೈಂಕರ್ಯ ಮುಗಿದ ಬಳಿಕ ಜಂಬೂ ಸವಾರಿ ಆರಂಭವಾಯಿತು.

ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಗೋಪಾಲಸ್ವಾಮಿ ಆನೆ.
ಗೋಪಾಲಸ್ವಾಮಿಗೆ ಕಾವೇರಿ ಆನೆ ಸಾಥ್. ಈ ವೇಳೆಗೆ ಪಟಾಕಿ ಸಿಡಿಸಿದ್ದರಿಂದ ಆನೆ ಬೆದರಿ ಓಡಲು ಮುಂದಾದಾಗ ಜನ ದಿಕ್ಕಾಪಾಲಾಗಿ ಹೋದರು. ನಂತರ ಮೆರವಣಿಗೆ ಮೊಟಕು ಗೊಳಿಸಲಾಯಿತು.


ಇಂದಿನಿಂದ ಮೂರು ದಿನ ನಡೆಯಲಿರುವ ಶ್ರೀರಂಗಪಟ್ಟಣ ದಸರಾ.
ಸಂಜೆ ಶ್ರೀರಂಗ ವೇದಿಕೆಯಲ್ಲಿ ಸಾಂಸ್ಕೃತಿಕ ರಸದೌತಣ ನಡೆಯಲಿದೆ.

Share This Article
Leave a comment