ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಕೆಲವು ನಗರಗಳಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ, ಭೂಮಿ ಕಂಪಿಸಿದಂತೆ ಭಾಸವಾಗುತ್ತಿದ್ದಂತೆ ಜನರು ಮನೆಗಳು ಹಾಗೂ ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ.
ಕಳೆದೊಂದು ವಾರದಲ್ಲಿ ನವದೆಹಲಿಯಲ್ಲಿ ಈ ರೀತಿಯ ಭೂಕಂಪನದ ಅನುಭವ ಎರಡನೇ ಬಾರಿ ಆಗುತ್ತಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ.
ಈ ವಾರದ ಆರಂಭದಲ್ಲಿ ದೆಹಲಿ ಪ್ರದೇಶದಲ್ಲಿ ಅನುಭವಿಸಿದ ಭೂಕಂಪದ ತೀವ್ರತೆಗಿಂತ ಕಡಿಮೆಯಾಗಿದೆ. ಈ ಭೂಕಂಪನದ ಆಳ ಮತ್ತೆ ಭೂಮಿಯ ಮೇಲ್ಮೈಯಿಂದ 10 ಕಿಲೋ ಮೀಟರ್ ಕೆಳಗಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ. ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿವೆ.
ಕಳೆದ ಬುಧವಾರ ನಸುಕಿನ ಜಾವ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತು. ಇದರ ಬೆನ್ನಲ್ಲೇ ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಯಿತು. ಬುಧವಾರ ನಸುಕಿನ 1.57ರ ಸುಮಾರಿಗೆ ಭೂಕಂಪ ಸಂಭವಿಸಿತು, ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಪ್ರಕಾರ ನೇಪಾಳ ಭೂಕಂಪದ ಕೇಂದ್ರಬಿಂದುವಾಗಿತ್ತು.
ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಮಾಹಿತಿಯ ಪ್ರಕಾರ, ನೇಪಾಳದಲ್ಲಿ ಮಂಗಳವಾರ ರಾತ್ರಿ 8.52 ಕ್ಕೆ 4.9 ತೀವ್ರತೆಯ ಮೊದಲ ಭೂಕಂಪವಾಗಿತ್ತು. ನಂತರ 9.41 ಕ್ಕೆ 3.5 ತೀವ್ರತೆಯ ಭೂಕಂಪ ದಾಖಲಾಯಿತು. ಬುಧವಾರ ಮುಂಜಾನೆ 1.57ಕ್ಕೆ 6.3 ತೀವ್ರತೆಯ ಮೂರನೇ ಭೂಕಂಪನ ಸಂಭವಿಸಿದ್ದು, ಇದರ ಕಂಪನವು ದೆಹಲಿಯಲ್ಲಿ ಅನುಭವವಾಯಿತು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ