ಮಿಮ್ಸ್ ಕ್ರೀಡಾಂಗಣದಲ್ಲಿ ವಿರಾಟ್-೨೦೨೧ ಅಥ್ಲೆಟಿಕ್ ಮೀಟ್ ಗೆ ಚಾಲನೆ

Team Newsnap
1 Min Read
  • ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ನೆರವು ಅಗತ್ಯ ‌-ಡಾ.ಕೆ.ಎಂ. ಶಿವಕುಮಾರ್ ಅಭಿಮತ

ಪ್ರಸ್ತುತ ದಿನಗಳಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ನೆರವು ಸರ್ಕಾರದಿಂದಲೇ ಲಭಿಸುತ್ತಿದೆ. ಇನ್ನೂ ಈ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಮಿಮ್ಸ್ ಪ್ರಾಂಶುಪಾಲ ಡಾ.ಕೆ.ಎಂ. ಶಿವಕುಮಾರ್ ಹೇಳಿದರು.

ನಗರದ ಮಿಮ್ಸ್ ಕ್ರೀಡಾಗಂಣದಲ್ಲಿ ವಿರಾಟ್-೨೦೨೧ ಅಥ್ಲೆಟಿಕ್ ಮೀಟ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ ಶಿವ ಕುಮಾರ್ ವೈದ್ಯ ವಿದ್ಯಾರ್ಥಿ ಗಳಿಗೆ ಕ್ರೀಡೆ ಅತ್ಯವಶ್ಯ, ಎಲ್ಲಾ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು, ಮನೋವಿಕಾಸಕ್ಕೆ ಕ್ರೀಡೆ ಪೂವಕ ಎಂದು ನುಡಿದರು.

ಮಿಮ್ಸ್ ನ ಕ್ರೀಡಾಂಗಣವನ್ನು ಹಂತ ಹಂತವಾಗಿ ಅಭಿವೃದ್ದಿ ಗೊಳಿಸಲಾಗುತ್ತಿದೆ, ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ, ವೈದ್ಯವಿದ್ಯಾರ್ಥಿಗಳಿಗೆ ಕ್ರೀಡಾಸಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವೈದ್ಯವಿದ್ಯಾರ್ಥಿಗಳಿಗೆ ಗಣ್ಯರು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಮೆಡಲ್, ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ. ಶ್ರೀಧರ್, ನಿಲಯಪಾಲಕ ಡಾ. ಡಿ.ಆರ್.ಹರೀಶ್, ಕ್ರೀಡಾಸಮಿತಿ ಸದಸ್ಯ ಡಾ.ಸಿದ್ದೇಗೌಡ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ತಮ್ಮಣ್ಣ, ಕ್ರೀಡಾನಿರ್ದೇಶಕ ಡಾ.ಸುರೇಶ್ ಮತ್ತಿತರರಿದ್ದರು.

Share This Article
Leave a comment