ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ 6 ಕೋಟಿ ರು ಭ್ರಷ್ಟಾಚಾರ – ಸಾ ರಾ ಮಹೇಶ್

Team Newsnap
1 Min Read

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ‌ ಸಾ ರಾ ಮಹೇಶ್ 6 ಕೋಟಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಾರಾ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಸುಮಾರು 6 ಕೋಟಿ ರು. ಅಕ್ರಮ ನಡೆದಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದರ ವಾಸ್ತವ ಬೆಲೆ 1,47,15,000 ಆಗಿದೆ. ಅವರು ಖರೀದಿ ಮಾಡಿರುವುದು 7 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ರೋಹಿಣಿ ಬ್ಯಾಗ್‍ನಲ್ಲೇ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು.

ಈಜುಕೊಳ, ಜಿಮ್, ಕಟ್ಟಡ ನವೀಕರಣದ ಹಣವನ್ನು ಅವರಿಂದಲೇ ವಸೂಲಿ ಮಾಡಿ. ಸರ್ಕಾರದ ತನಿಖಾ ವರದಿಗಳ ಮೂಲಕ ಅವರ ತಪ್ಪು ಸಾಬೀತಾಗಿದೆ. ಅವರ 12 ವರ್ಷದ ಅವಧಿಯನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಅದಕ್ಕಾಗಿಯೇ ನಾನು ರೋಹಿಣಿ ಮೈಸೂರಿಗೆ ಬಂದಾಗ ವಿರೋಧಿಸಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದಲ್ಲಿ ಎಷ್ಟು ಅಕ್ರಮ ಆಗಿರಬಹುದು. ರೋಹಿಣಿ ಸಿಂಧೂರಿ ನನ್ನ ಶಿಷ್ಯೆ ಎಂದು ಮನೀಷ್ ಹೇಳಿದ್ದರು. ಶಿಷ್ಯೆಗೆ ಇದೇ ಏನು ನೀವು ಹೇಳಿ ಕೊಟ್ಟಿರುವುದು? ಎಂದು ಮನೀಷ್ ಮುದ್ಗಲ್ ವಿರುದ್ದವೂ ವಾಗ್ದಾಳಿ ಮಾಡಿದರು.

ರೋಹಿಣಿ ಸಿಂಧೂರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವರನ್ನು ಅಮಾನತು ಮಾಡಿ. ಇಲ್ಲ, ನಿಮ್ಮ ಕಚೇರಿ ಮುಂದೆ ಅಮರಾಣಾಂತ ಉಪವಾಸ ಮಾಡುತ್ತೇವೆ. ಒಳ್ಳೆಯ ಅಧಿಕಾರಿಗಳಿಗೆ ಕೈ ಮುಗಿಯುತ್ತೇವೆ. ಈ ರೀತಿಯ ಭ್ರಷ್ಟಾಚಾರ ಮಾಡುವ ಅಧಿಕಾರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Share This Article
Leave a comment