ಸಂಪುಟ ಪುನರ್ ರಚನೆಗೆ ಪಟ್ಟು : ಡಜನ್ ಗಟ್ಟಲೆ ಶಾಸಕರು ಮಂತ್ರಿಗಿರಿಗೆ ಸಜ್ಜು – ಸಿಎಂಗೆ ತಲೆ ಬಿಸಿ

Team Newsnap
1 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ಪಂಚರಾಜ್ಯ ಚುನಾವಣಾ ಪ್ರಚಾರದ ಕಾವು ದಿನೇ ದಿನೇ ಕಾವೇರುತ್ತಿರುವ ಸಮಯದಲ್ಲಿ ಡಜನ್ ಗಟ್ಟಲೆ ಶಾಸಕರು ತಮ್ಮನ್ನು ಮಂತ್ರಿ ಮಾಡುವಂತೆ ಒತ್ತಡ ಹೇರುತ್ತಿರುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿದೆ

ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಸಿಎಂ ಪಕ್ಷದ ಹೈಕಮಾಂಡ್ ನಾಯಕರು ಪಂಚರಾಜ್ಯ ಚುನಾವಣೆಯಲ್ಲಿ ಒತ್ತಡದಲ್ಲಿ ಇದ್ದಾರೆ. ಆದರೂ ಸೋಮವಾರ ದೆಹಲಿ ಭೇಟಿ ನೀಡಲು ಸಜ್ಜಾಗಿ ನಿಂತಿರುವ ಸಿಎಂ ಬೊಮ್ಮಾಯಿಗೆ ಭೇಟಿಗೆ ಇನ್ನೂ ಗ್ರೀನ್‍ಸಿಗ್ನಲ್ ಸಿಕ್ಕಿಲ್ಲ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ, ನನಗೆ ಮಂತ್ರಿ ಸ್ಥಾನ ಬೇಕೇಬೇಕು ಎಂದು ಕುಳಿತಿದ್ದಾರೆ.

ಯಾರು ಸಚಿವ ಅಕಾಂಕ್ಷಿಗಳು ?

ಸರ್ಕಾರದಲ್ಲಿ ಈ ಬಾರಿ ಸಂಪುಟ ಸರ್ಜರಿ ನಡೆದರೆ ಬಹುಶಃ ಇದೇ ಕೊನೆಯದ್ದು. ಹೀಗಾಗಿ ಕೆಲ ತಿಂಗಳ ಮಟ್ಟಿಗಾದ್ರೂ ಮಂತ್ರಿಯಾಗೋಣ ಎಂದು ಬಿಜೆಪಿಯ ಒಂದು ಡಜನ್‍ಗೂ ಹೆಚ್ಚು ಶಾಸಕರು ಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ. ಆದಷ್ಟು ಬೇಗ ಸಂಪುಟ ಸರ್ಜರಿ ಮಾಡಿ ಎಂದು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಹುತೇಕರು ತಮ್ಮದೇ ನೆಟ್‍ವರ್ಕ್ ಮೂಲಕ ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸಿದ್ದಾರೆ.

ಪಿ.ರಾಜೀವ್, ಕುಡಚಿ ಶಾಸಕ,

ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ

ರಾಜೂಗೌಡ, ಸುರಪುರ ಶಾಸಕ

ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಶಾಸಕಿ

ರೂಪಾಲಿ ನಾಯಕ್, ಕಾರವಾರ ಶಾಸಕಿ

ರಾಮದಾಸ್. ಮೈಸೂರು

ಪ್ರೀತಂಗೌಡ ಹಾಸನ

ಸಿ ಪಿ ಯೋಗೇಶ್ವರ್ ಎಂಎಲ್ ಸಿ

ರೇಣುಕಾಚಾಯ೯ ಹೊನ್ನಾಳಿ

ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ

ಅರವಿಂದ್ ಬೆಲ್ಲದ್
ಧಾರವಾಡ ದಕ್ಷಿಣ

ಎಂ ಪಿ ಕುಮಾರಸ್ವಾಮಿ ಮೂಡಗೆರೆ

Share This Article
Leave a comment