ರಾಜಕೀಯ ಅಂತ್ಯವಾಗುತ್ತೋ ಗೊತ್ತಿಲ್ಲ : ಆನಂದ್ ಸಿಂಗ್

Team Newsnap
1 Min Read

ತಮ್ಮ ರಾಜಕೀಯ ಜೀವನ ೧೫ ವರ್ಷಗಳ ಹಿಂದೆ ಆರಂಭವಾಗಿದೆ. ಅದು ಹೊಸಪೇಟೆಯ ಗೋಪಾಲ ಕೃಷ್ಣನ ದೇಗುಲದಲ್ಲಿ. ರಾಜಕೀಯ ಅಂತ್ಯವಾಗುತ್ತಾ ಇಲ್ಲೇ ಆಗುತ್ತಾ ಗೊತ್ತಿಲ್ಲ ಎಂದು ಸಚಿವ ಆನಂದ್ ಸಿಂಗ್ ಮಾರ್ಮಿಕವಾಗಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಆನಂದ್ ಸಿಂಗ್, ಆ ಗೋಪಾಲ ಕೃಷ್ಣನ ಆಶೀರ್ವಾದ, ಕೃಪೆ ಇದ್ದರೆ ಮತ್ತೆ ರಾಜಕೀಯ ಜೀವನ ಪುನರ್ ಪ್ರಾರಂಭವಾಗಬಹುದು. ಇಲ್ಲದೇ ಇಲ್ಲಿಗೆ ಅಂತ್ಯ ಅನ್ನುವುದಾದರೆ ಕೃಷ್ಣನ ಆಶೀರ್ವಾದ ಪಡೆದು ತಮ್ಮ ಹೊಸ ಜೀವನ ಪ್ರಾರಂಭಮಾಡುವ ಬಗ್ಗೆ ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಕಾದು ನೋಡಬೇಕು ಎಂದರು

ಬೆಂಗಳೂರಿಗೆ ಇಂದೇ ಹೋಗಬೇಕಾ ಅಥವಾ ನಾಳೆನಾ ಎಂಬ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ.‌ನಾನು ಈ ರಾಜ್ಯದ ಅತಿ ದೊಡ್ಡ ರಾಜಕಾರಣಿ ಅಲ್ಲ. ನಾಯಕನೂ ಅಲ್ಲ. ಎಲ್ಲರೂ ಹೇಳುತ್ತಾರೆ ಶಿಸ್ತಿನ ಸಿಪಾಯಿ ಅಂತ. ಇದು ನನ್ನ ಕ್ಷೇತ್ರದ ಜನತೆಗೆ ಗೊತ್ತಿದೆ. ನನ್ನ ರಾಜಕೀಯ ಜೀವನ ಒಂದು ದೊಡ್ಡ ಪ್ರಯಾಣ ಅಲ್ಲ. ರಾಜಕೀಯ ಜೀವನ ೧೫ ವರ್ಷದ್ದು. ಸಮಾಜ ಸೇವೆ ೫ ವರ್ಷದ್ದು. ಇದೇ ದೇವಸ್ಥಾನದಿಂದ ೨೦೦೦ನೇ ಇಸವಿಯಲ್ಲಿ ನನ್ನ ಜೀವನದ ಪ್ರಯಾಣ ಆರಂಭವಾಗಿದ್ದು ಈ ದೇಗುಲದಲ್ಲಿ. ಇಲ್ಲಿ ಏನೂ ಒಂದು ಶಕ್ತಿಇದೆ‌ ಎಂದರು

ನಾನು ಭ್ರಮೆಯಲ್ಲಿದ್ದೇ ಎಂದು ಅನಿಸುತ್ತಿದೆ. ಹಣ ಮಾಡಬೇಕು, ಕೊಳ್ಳೆಹೊಡಿಬೇಕು ಎಂದು ನಾನೂ ಎಂದೂ ರಾಜಕಾರಣಕ್ಕೆ ಬಂದೋನಲ್ಲ. ನಾನೇನಾದರು ತಪ್ಪು ಹೇಳಿದ್ದರೆ ಆ ಗೋಪಾಲಕೃಷ್ಣನೆ ಶಿಕ್ಷೆ ಕೊಡಲಿ ಎಂದೂ ಹೇಳಿದರು.


ಅಂದು ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕರಕ್ಷೆಯಾಗಿ ಶ್ರೀಕೃಷ್ಣ ಹೇಗೆ ನಿಂತಿದ್ದನೋ ಅದೇ ರೀತಿ ನಾನು ಇಂದು ತೆಗೆದುಕೊಳ್ಳುವ ನಿರ್ಧಾರಕ್ಕೆ ಗೋಪಾಲಕೃಷ್ಣ ಬೆಂಬಲವಾಗಿ ನಿಂತಿರುತ್ತಾನೆ ಎಂಬ ಆತ್ಮವಿಶ್ವಾಸವಿದೆ ಎಂದರು.

Share This Article
Leave a comment