ಐಎಎಸ್ ಪತಿ – ಪತ್ನಿ ವಿಚ್ಛೇದನಕ್ಕೆ ಕೋರ್ಟ್ ಸಮ್ಮತಿ – ಇದು ಲೌವ್ ಜಿಹಾದ್ ಅಲ್ಲ

Team Newsnap
1 Min Read

ನಿಮಗೆ ನೆನಪಿರಬುಹುದು.
ಐಎಎಸ್ ನಲ್ಲಿ ಮೊದಲ ರ‍್ಯಾಂಕ್‌ ಯುವತಿ ಹಾಗೂ ಎರಡನೇ ರ‍್ಯಾಂಕ್‌ ಬಂದಿದ್ದ ಯುವಕ ತರಬೇತಿ ವೇಳೆಯಲ್ಲಿ ಪ್ರೀತಿಸಿ‌ ಮದುವೆಯಾಗಿದ್ದರು.
ಕೇವಲ ಎರಡು ವರ್ಷಗಳಲ್ಲಿ ಈ ಐಎಎಸ್ ಪತಿ- ಪತ್ನಿ ವಿಚ್ಛೇದನ ಪಡೆದುಕೊಂಡಿದ್ದಾರೆ.

ಟೀನಾ ಡಾಬಿ ಐಎಎಸ್ ನಲ್ಲಿ ಫಸ್ಟ್ ರ‍್ಯಾಂಕ್‌ ಬಂದಿದ್ದ ಟೀನಾ ಡಾಬಿ ಹಾಗೂ, ಸೆಕೆಂಡ್ ರ‍್ಯಾಂಕ್‌. ಅಥರ್ ಖಾನ್ ಇವರುಗಳ ಪ್ರೀತಿಸಿ ಮದುವೆಯಾಗಿ ಈಗ ವಿಚ್ಛೇದನ ಪಡೆದುಕೊಂಡು ನಿರಾಳರಾಗಿದ್ದಾರೆ.

teena daabi1

ಐಎಎಸ್ ತರಬೇತಿ ವೇಳೆಯಲ್ಲಿ ಪ್ರೀತಿಸಿ, ಮದುವೆಯಾಗಿದ್ದರು. ಇಬ್ಬರೂ ಒಂದಾಗದೆ ಕೊನೆಗೂ ವಿಚ್ಚೇದನ ಪಡೆದಿದ್ದಾರೆ. ಲವ್ ಜಿಹಾದ್ ಅಂತ ಹಿಂದು ಪರ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಒಳಗಾಗಿ ದೇಶಾದ್ಯಾಂತ ಬಾರೀ ಸುದ್ಧಿಯಾಗಿತ್ತು.ಈ ದಂಪತಿಗಳು ರಾಜಿ ಸಂಧಾನ ಸಫಲವಾಗಿಲ್ಲ

ಇಬ್ಬರು ರಾಜಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ. ಮದುವೆಯಾಗಿ ಎರಡು ವರ್ಷಗಳ ಕಾಲ ಬಾಳ್ವೆ ಮಾಡಿ ಇಬ್ಬರು ಆದರ್ಶ ದಂಪತಿಗಳಾಗಿದ್ದರು. ಈಗ ಅದು ಕನಸಿನ ಮಾತು.

ಕೌಟುಂಬಿಕ ಕಲಹದಿಂದ ಇಬ್ಬರು ವಿಚ್ಚೇದನಕ್ಕೆ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಕೌನ್ಸಿಲ್ ಮೂಲಕ ರಾಜಿ ಸಂಧಾನ ಮಾಡಿ ಇಬ್ಬರ ಸಂಬಂಧ ಗಟ್ಟಿ ಮಾಡಲು ನ್ಯಾಯಾಲಯವೂ ಪ್ರಯತ್ನ ಮಾಡಿತ್ತು. ಆದರೆ ಇಬ್ಬರಲ್ಲಿ ವೈಮನಸ್ಸು ಹೆಚ್ಚಾದ ಕಾರಣಕ್ಕಾಗಿ ಕೋರ್ಟ್ ಪ್ರಯತ್ನವೂ ವಿಫಲವಾತು. ಕೊನೆಗೆ ವಿಚ್ಛೇದನ ಕ್ಕೆ ಕೌಟುಂಬಿಕ ನ್ಯಾಯಾಲಯವೇ ಸಮ್ಮತಿ ಸೂಚಿಸಿತು.

Share This Article
Leave a comment