PSI ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

Team Newsnap
1 Min Read

ಕಲಬುರಗಿ ಜ್ಞಾನ ಜ್ಯೋತಿಶಾಲೆಯಲ್ಲಿ ಪಿಎಸ್ಐ (PSI) ಪರೀಕ್ಷೆ ಅಕ್ರಮದಲ್ಲಿ. ಭಾಗಿಯಾಗಿ ತಲೆಮರೆಸಿಕೊಂಡಿದ್ದ ಶಾಲೆಯ ಮುಖ್ಯಸ್ಥೆ , ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಪೋಲಿಸರು ಬಂಧಿಸಿದ್ದಾರೆ.

ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಕಳೆದ ರಾತ್ರಿ ಪುಣೆ ಯಲ್ಲಿ ಅಡಗಿ ಕುಳಿತಿದ್ದ ದಿವ್ಯಾಳನ್ನು ವಶಕ್ಕೆ ಪಡೆದಿದೆ. ಇಂದು ಬೆಳಿಗ್ಗೆ 10 ಗಂಟೆ ವೇಳೆಗೆ ದಿವ್ಯಾಳನ್ನು ಕಲಬುರಗಿಗೆ ಕರೆದುಕೊಂಡು ಬರಲಾಗುತ್ತಿದೆ.

ಈ ನಡುವೆ ಶಾಂತಬಾಯಿ ಎಂಬ ಮತ್ತೊಬ್ಬ ಮಹಿಳೆ ಏ 11 ರಿಂದಲೇ ನಾಪತ್ತೆಯಾಗಿದ್ದಾಳೆ. ಈಕೆ ಸೇಡಂ ತಾಲೂಕಿನ ಕೊನಾಪುರ ತಾಂಡ ನಿವಾಸಿ. ಆಕೆ ಗಂಡ ಯಾದಗಿರಿ ಜಿಪಂ ನ ಹೊರ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಬಸ್ಯಾ ನಾಯ್ಕ ಕೂಡ ಪಿಎಸ್ಐ ಪರೀಕ್ಷೆ ಬರೆದಿದ್ದನು. ಪತಿ , ಪತ್ನಿಯನ್ನು ದಾಖಲಾತಿಗೆ ಪರಿಶೀಲನೆ ಮಾಡಲು ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದರೂ ಇಬ್ಬರು ನಾಪತ್ತೆಯಾಗಿದ್ದಾರೆ

ಪ್ರಕರಣದ ಪ್ರಮುಖ ಆರೋಪಿ ಜ್ಯೋತಿ ಪಾಟೀಲ್ ಹಾಗೂ ಮಂಜುನಾಥ್ ಮೇಳಕುಂದಿ ಅವರಿಗೆ ಈ ಶಾಂತಬಾಯಿ ಲಕ್ಷಾಂತರ ಹಣ ಕೊಟ್ಟು ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿರುವ ಅಂಶ ತನಿಖೆಯಲ್ಲಿ ಬಯಲಾಗಿದೆ.

ಜ್ಯೋತಿ ಪಾಟೀಲ್ ಬಂಧನವಾಗಿದೆ. ಶಾಂತಾಬಾಯಿ ಮತ್ತು ಆಕೆಯ ಪತಿ ಬಸ್ಯಾ ನಾಯ್ಕ ಎಸ್ಕೇಪ್ ಆಗಿದ್ದಾರೆ.

Share This Article
Leave a comment