May 21, 2022

Newsnap Kannada

The World at your finger tips!

bommai 1

ಇಂದು ಸಂಜೆ ಬೊಮ್ಮಾಯಿ ದೆಹಲಿಗೆ – ಭಾನುವಾರ ವಾಪಸ್‌

Spread the love

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಂಕಟ , ಕಸರತ್ತಿಗೆ ಮತ್ತೆ ಚಾಲನೆ ಸಿಕ್ಕಿದೆ, ಇಂದು (ಶುಕ್ರವಾರ) ಸಂಜೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ತೆರಲಿದ್ದಾರೆ.

ಹೈಕಮಾಂಡ್ ನಾಯಕರ ಜೊತೆ ಸಂಪುಟ ಸಂಬಂಧ ಚರ್ಚೆ ನಡೆಸುವ ಸಂಭವ ಇದೆ. ಸಿಎಂ ದೆಹಲಿ ಭೇಟಿ ವೇಳೆ ಕ್ಯಾಬಿನೆಟ್ ಸರ್ಜರಿಗೆ ಅನುಮತಿ ಸಿಗುವುದು ಅನುಮಾನ.

ಮೇ 3ರಂದು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಸಂಪುಟ ಪುನಾರಚನೆ ಆಗಬಹುದು.

ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಏಪ್ರಿಲ್ 30ರಂದು ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನಾಯಮೂರ್ತಿಗಳ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಏಪ್ರಿಲ್ 30ರಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಆಯೋಜಿಸಿರುವ ಭೋಜನ ಕೂಟದಲ್ಲೂ ಸಿಎಂ ಭಾಗಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಸಿಎಂ ವಾಪಸ್‌ ಆಗಲಿದ್ದಾರೆ.

error: Content is protected !!