ಕೃಷಿ ಸೊಸೈಟಿಗಳಿಗೆ ಡಿಜಿಟಲ್‌ ಸ್ಪರ್ಶ: ಕೇಂದ್ರ ಸಚಿವ ಸಂಪುಟ ಅಸ್ತು

Team Newsnap
1 Min Read

ದೇಶದ ಸಹಕಾರಿ ವಲಯದ ಅತೀ ಸಣ್ಣ ಘಟಕಗಳಾದ ಪ್ರಾಥಮಿಕ ಕೃಷಿ ವಿತರಣ ಸೊಸೈಟಿಗಳನ್ನು (ಪಿಎಸಿಎಸ್‌) ಗಣಕೀಕೃತ ಮಾಡುವ ಮಹತ್ವದ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.

63 ಸಾವಿರ ಪಿಎಸಿಎಸ್‌ಗಳನ್ನು 2,516 ಕೋ. ರೂ. ವೆಚ್ಚದಲ್ಲಿ ಕಂಪ್ಯೂಟರೀಕರಣಗೊಳಿಸಲಾಗುತ್ತದೆ. ಕೇಂದ್ರ 1,528 ಕೋ. ರೂ. ನೀಡಲಿದೆ. ಈ ಸೊಸೈಟಿಗಳ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಾಗಿ ಎಲ್ಲ ವ್ಯವಹಾರಗಳೂ ತ್ವರಿತವಾಗಿ ನಡೆಯಲಿದೆ. ದೇಶದ 13 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಅನುಕೂಲವಾಗಲಿದೆ.

ದತ್ತಾಂಶ ಸಂರಕ್ಷಣೆಗೆ ಕ್ರಮ:

ಗಣಕೀಕರಣ ವೇಳೆಯಲ್ಲಿ ಎಲ್ಲ ಪಿಎಸಿಎಸ್‌ಗಳಿಗೂ ಹಾರ್ಡ್‌ವೇರ್‌ ನೆರವು ನೀಡಲಾಗುತ್ತದೆ ಹಾಗೂ ಸೊಸೈಟಿಗಳ ವತಿಯಿಂದ ಈವರೆಗೆ ನಿರ್ವಹಿಸಲಾಗಿರುವ ಎಲ್ಲ ಲಿಖಿತ ರೂಪದ ವ್ಯವಹಾರ ಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತದೆ. ಇದೊಂದು ಕ್ಲೌಡ್‌ ಆಧಾರಿತ ಸಾಫ್ಟ್‌ವೇರ್.

ಸ್ಥಳೀಯ ಭಾಷೆಯಲ್ಲೇ ವ್ಯವಹಾರ:

ಗಣಕೀಕೃತ ಕಾರ್ಯ ಪೂರ್ಣಗೊಂಡ ಬಳಿಕ ಎಲ್ಲ ರಾಜ್ಯಗಳಲ್ಲಿರುವ ಪಿಎಸಿಎಸ್‌ಗಳೂ ಸ್ಥಳೀಯ ಭಾಷೆಯಲ್ಲಿಯೇ ವ್ಯವಹಾರ ನಡೆಸಲು ಅನುಕೂಲವಾಗುವಂಥ ಸಾಫ್ಟ್‌ವೇರ್ ಅಳವಡಿಸಲಾಗುತ್ತದೆ. ಈ ಸಾಫ್ಟ್‌ವೇರ್ ನಡಿಯಲ್ಲಿ ನಿರ್ವಹಿಸಲಾಗುವ ವ್ಯವಹಾರಗಳು ಸೋರಿಕೆಯಾಗದಂತೆ ತಡೆಯಲು ಕ್ಲೌಡ್ ತಂತ್ರಜ್ಞಾನ ಆಧಾರಿತ ಸಂಗ್ರಹಣ ವ್ಯವಸ್ಥೆ ಹಾಗೂ ಸೈಬರ್‌ ಭದ್ರತೆ ಹಾಗೂ ದತ್ತಾಂಶ ಸಂರಕ್ಷಣ ವಿಧಾನಗಳನ್ನು ಅಳವಡಿಸಲಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.

ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧನೆ– ಆರಿಫ್ ಖಾನ್ ಕಿಡಿ

ನೋಡಲ್‌ ಕೇಂದ್ರವಾಗಿ ಪರಿವರ್ತನೆ:

ಪ್ರತಿಯೊಂದು ಪಿಎಸಿಎಸ್‌ ಕೇಂದ್ರವನ್ನು ನೋಡಲ್‌ ಕೇಂದ್ರವನ್ನಾಗಿ ಪರಿವರ್ತಿಸಿ, ಅವುಗಳ ಮೂಲಕ ಖಾತೆಗಳಿಗೆ ನೇರ ಹಣ ವರ್ಗಾವಣೆ (ಡಿಬಿಟಿ), ಬಡ್ಡಿ ಸಹಾಯ ಧನ ಯೋಜನೆ (ಐಎಸ್‌ಎಸ್‌), ಬೆಳೆ ವಿಮಾ ಯೋಜನೆ (ಪಿಎಂಎಫ್ಬಿವೈ) ಹಾಗೂ ರಸಗೊಬ್ಬರ, ಬೀಜ ವಿತರಣೆ ವ್ಯವಹಾರಗಳ ಕೇಂದ್ರವನ್ನಾಗಿಯೂ ಪರಿವರ್ತಿಸಲು ನಿರ್ಧರಿಸಲಾಗಿದೆ.

Share This Article
Leave a comment