ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧ– ಆರಿಫ್ ಖಾನ್ ಕಿಡಿ

Team Newsnap
1 Min Read
In the madrasas, children are taught the law of cutting ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧ– ಆರಿಫ್ ಖಾನ್ ಕಿಡಿ #thenewsnap #latestnews #crime #madras #NEWS #mandya #bengalru_news #namma_mysuru #kannada_news

ರುಂಡ ಕತ್ತರಿಸಬೇಕು ಎನ್ನುವುದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಇದೇ ಕಾನೂನನ್ನು ಮದರಸಾಗಳಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಿಡಿ ಕಾರಿದ್ದಾರೆ.

ರಾಜಾಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯ ರುಂಡ ಕತ್ತರಿಸಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.ಇದನ್ನು ಓದಿ -ಇದನ್ನು ಓದಿ –ಅಗ್ನಿಪಥ್‌ ನೋಂದಣಿ: ವಾಯುಸೇನೆಗೆ 6 ದಿನದಲ್ಲಿ 1.83 ಲಕ್ಷ ನೋಂದಣಿ

ಪ್ರಮುಖ ಸಿನಿ ತಾರೆಯರೂ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಖಂಡನೆ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರಜೊತೆ ಮಾತನಾಡಿರುವ ಆರಿಫ್ ಖಾನ್ ಉದಯಪುರದಂತಹ ಘಟನೆಗಳಿಗೆ ಮದರಸಾ ಶಿಕ್ಷಣವೇ ಕಾರಣ. ಇಂತಹ ಶಿಕ್ಷಣ ಮಕ್ಕಳಿಗೆ ಅಗತ್ಯವಿಲ್ಲ. ಮುಸ್ಲಿಂ ಲಾ(ಮುಸ್ಲಿಂ ಕಾನೂನು), ಖುರಾನ್‌ನಲ್ಲಿಯೂ ರುಂಡ ಕತ್ತರಿಸಬೇಕೆಂಬ ಕಾನೂನು ಇಲ್ಲ. ಇದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಆಗ ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ರುಂಡ ಕತ್ತರಿಸುವ ಅಧಿಕಾರ ಇತ್ತು. ಇದೇ ಕಾನೂನನ್ನು ಮದರಸಾಗಳಲ್ಲಿ ಬೋಧಿಸಲಾಗುತ್ತದೆ ಎಂದು ಮದರಸಾ ಶಿಕ್ಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a comment