ನಾಳೆಯೇ ಉದ್ಧವ್​​ಗೆ ಬಹುಮತ ಸಾಬೀತಿಗೆ ‘ಸುಪ್ರೀಂ’ ನಿರ್ದೇಶನ

Team Newsnap
1 Min Read

ನಾಳೆಯೇ (ಜೂನ್ 30) ಬಹುಮತ ಸಾಬೀತು ಪಡಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್​​ ಎತ್ತಿ ಹಿಡಿದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನಾಳೆಯೇ ಬಹುಮತ ಸಾಬೀತು ಪಡಿಸಿ ಎಂದು ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.

3 ಪ್ರಮುಖ ಬೇಡಿಕೆಗಳೊಂದಿಗೆ ಏಕನಾಥ್ ಶಿಂಧೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು.

ಈ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್​ ಈಗ ತುರ್ತು ವಿಚಾರಣೆ ಮಾಡಿದೆ. ಅಲ್ಲದೇ ತನ್ನ ಮಹತ್ವದ ತೀರ್ಪನ್ನು ಪ್ರಕಟಿಸಿದೆ

ಉದ್ಧವ್​ ಠಾಕ್ರೆ ಬಂಡಾಯ ಶಾಸಕರ ಕಾರಣದಿಂದಲೇ 3ನೇ ಎರಡರಷ್ಟು ಬೆಂಬಲ ಕಳೆದುಕೊಂಡಿದೆ. ಯಾವುದೇ ಕಾರಣಕ್ಕೂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ನಾವು ಬೆಂಬಲ ನೀಡಲ್ಲ. ನಾವು 39 ಶಾಸಕರು ಸರ್ಕಾರದಿಂದ ಹೊರ ಬಂದಿದ್ದು ಬೆಂಬಲ ಹಿಂಪಡೆದಿದ್ದೇವೆ ಎಂದಿದ್ದಾರೆ ಶಿಂಧೆ.

ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧ – ಆರಿಫ್ ಖಾನ್ ಕಿಡಿ

ರುಂಡ ಕತ್ತರಿಸಬೇಕು ಎನ್ನುವುದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಇದೇ ಕಾನೂನನ್ನು ಮದರಸಾಗಳಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಿಡಿ ಕಾರಿದ್ದಾರೆ.

ರಾಜಾಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯ ರುಂಡ ಕತ್ತರಿಸಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಪ್ರಮುಖ ಸಿನಿ ತಾರೆಯರೂ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಖಂಡನೆ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರಜೊತೆ ಮಾತನಾಡಿರುವ ಆರಿಫ್ ಖಾನ್ ಉದಯಪುರದಂತಹ ಘಟನೆಗಳಿಗೆ ಮದರಸಾ ಶಿಕ್ಷಣವೇ ಕಾರಣ. ಇಂತಹ ಶಿಕ್ಷಣ ಮಕ್ಕಳಿಗೆ ಅಗತ್ಯವಿಲ್ಲ. ಮುಸ್ಲಿಂ ಲಾ(ಮುಸ್ಲಿಂ ಕಾನೂನು), ಖುರಾನ್‌ನಲ್ಲಿಯೂ ರುಂಡ ಕತ್ತರಿಸಬೇಕೆಂಬ ಕಾನೂನು ಇಲ್ಲ. ಇದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಆಗ ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ರುಂಡ ಕತ್ತರಿಸುವ ಅಧಿಕಾರ ಇತ್ತು. ಇದೇ ಕಾನೂನನ್ನು ಮದರಸಾಗಳಲ್ಲಿ ಬೋಧಿಸಲಾಗುತ್ತದೆ ಎಂದು ಮದರಸಾ ಶಿಕ್ಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a comment