ಕೊನೆಗೂ ಮಾಜಿ ಸಂಸದ ಎಲ್ . ಆರ್ . ಶಿವರಾಮೇಗೌಡ ಅವರನ್ನು ಪಕ್ಷದಿಂದ ನೋಟಿಸ್ ನೀಡಿ ಉಚ್ಛಾಟನೆ ಮಾಡಲು ಸೂಚನೆ ನೀಡಲಾಗಿದೆ ಜೆಡಿಎಸ್ ಅಧಿಪತಿ ಎಚ್ ಡಿ ಕುಮಾರಸ್ವಾಮಿ ಪ್ರಕಟಿಸಿದರು.
ಭಾನುವಾರ ಶಿವರಾಮೇಗೌಡರ ಜೆಡಿಎಸ್ ಕಾರ್ಯಕತೆ೯ಯೊಬ್ಬರಿಗೆ ದೂರವಾಣಿ ಕರೆ ಮಾಡಿ, ಮಂಡ್ಯ ಮಾಜಿ ಸಂಸದ ರೈತ ಹೋರಾಟಗಾರ ದಿ. ಮಾದೇಗೌಡರ ವಿರುದ್ದ ವಾಚಮಗೋಚರವಾಗಿ ಬೈದ ಸಂಗತಿ ಆಡಿಯೋ ವೈರಲ್ ಅದ ನಂತರ ಕುಮಾರಸ್ವಾಮಿ, ಮಾದೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಾನು, ಪಕ್ಷದ ವರಿಷ್ಠರಾದ ದೇವೇಗೌಡರ ಜೊತೆ ಮಾತನಾಡಿಯೇ ಶಿವರಾಮೇಗೌಡರನ್ನು ಪಕ್ಷದಿಂದ ನೋಟಿಸ್ ಕೊಟ್ಟು ನಂತರ ಉಚ್ಛಾಟಿಸುವುದಾಗಿ ತಿಳಿಸಿದರು.
ನೋಟಿಸ್ ಬಂದ ಮೇಲೆ ಉತ್ತರ :
ಕುಮಾರಸ್ವಾಮಿ ತಮ್ಮನ್ನು ಜೆಡಿಎಸ್ ನಿಂದ ಉಚ್ಛಾಟಿಸುವ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೊದಲು ನನಗೆ ನೋಟಿಸ್ ಬರಲಿ. ಉತ್ತರ ಕೊಡುವೆ. ನಾನೂ ಕೂಡ ದೇವೇಗೌಡರು ಹಾಗೂ ಕುಮಾರಸ್ವಾಮಿ ಜೊತೆ ಮಾತುಕತೆ ಮಾಡುವೆ ಎಂದು ಶಿವರಾಮೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು