ಚಿಂತಾಮಣಿ ಕಾಲೇಜಿನ ಪ್ರಾಂಶುಪಾಲೆ ನಕಲಿ ಸಹಿ ಮಾಡಿ 68 ಲಕ್ಷರು ಗುಳುಂ : ಆರೋಪಿ ಗುಮಾಸ್ತ ಎಸ್ಕೇಪ್

Team Newsnap
1 Min Read

ಸ್ಕಾಲರ್‌ಶಿಪ್ ಹಣದ ಮೇಲೆ ಗುಮಾಸ್ತ ಕಣ್ಣು ಹಾಕಿ, ಕಾಲೇಜಿನ ಪ್ರಾಂಶುಪಾಲೆ ಸಹಿ ನಕಲಿ ಮಾಡಿ 68 ಲಕ್ಷ ರು ಗುಳುಂ ಮಾಡಿ ಪರಾರಿಯಾಗಿರುವ ಘಟನೆ ಜರುಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ 68 ಲಕ್ಷ 65 ಸಾವಿರ ರೂಪಾಯಿ ಹಣ ಮಂಜೂರು ಮಾಡಿತ್ತು.

ದ್ವೀತಿಯ ದರ್ಜೆ ಗುಮಾಸ್ತ ಎನ್. ಸಂತೋಷ್ ಕುಮಾರ್ ವಂಚನೆ ಮಾಡಿದ್ದಾನೆ.

ವಿದ್ಯಾರ್ಥಿ ವೇತನ ಕಡತಗಳ ನಿರ್ವಹಣೆ ಮಾಡುತ್ತಿದ್ದ ಈತ 68 ಲಕ್ಷ 65 ಸಾವಿರ ರುಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲೆ ಶಾರದರ ನಕಲಿ ಸಹಿಗಳನ್ನು ಮಾಡಿ, ಬೆಂಗಳೂರು ಧಣಿಸಂದ್ರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಂತೋಷ್​ ತನ್ನ ವೈಯುಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ತನಿಖೆ ಆರಂಭವಾಗಿದೆ. ಸಂತೋಷ್ ಪರಾರಿಯಾಗಿದ್ದಾನೆ.

Share This Article
Leave a comment