ವಿದ್ಯುತ್ ಟ್ರಾನ್ಸ್​ಫಾರ್ಮರ್​ ಸ್ಫೋಟದಲ್ಲಿ ತಂದೆ , ಮಗಳು ಸಾವು 20 ಲಕ್ಷ ರು ಪರಿಹಾರ ಪ್ರಕಟ

Team Newsnap
1 Min Read

ಬೆಂಗಳೂರಿನ ಮಂಗನಹಳ್ಳಿ ಬ್ರಿಡ್ಜ್​ ಬಳಿ ನಿನ್ನೆ ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡು ತಂದೆ ಸಾವನ್ನಪ್ಪಿ, ಮಗಳು ಚೈತನ್ಯಾಗೆ ಗಂಭೀರ ಗಾಯಗಳಾಗಿತ್ತು. ಆದರೆ ತಡರಾತ್ರಿ ಚೈತನ್ಯಾ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

electric cureent 1

ಮಗಳ ಮದುವೆಗೆ ಕಲ್ಯಾಣ‌ ಮಂಟಪ ಬುಕ್ ​ಮಾಡಿ ಬರುವಾಗ ಘಟನೆ ನಡೆದಿತ್ತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತನ್ಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪತಿ ಹಾಗೂ ಮಗಳನ್ನು ಕಳೆದುಕೊಂಡ ರತ್ನಮ್ಮಾ ಆಘಾತಕ್ಕೆ ಒಳಗಾಗಿದ್ದಾರೆ. ಘಟನೆಯನ್ನು ಖಂಡಿಸಿ ಬೆಸ್ಕಾಂ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಘಟನೆಗೆ ಕಾರಣರಾದ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.  ಕೇವಲ 10 ಲಕ್ಷ ರೂಪಾಯಿಗಳ ಪರಿಹಾರ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇಡೀ ಕುಟುಂಬದಲ್ಲಿ ಉಳಿದಿರುವುದೇ ಓರ್ವ ಗೃಹಿಣಿ. ಚೈತನ್ಯಾ ತಾಯಿ ವೃದ್ಧೆ, ಆಕೆಯ ಜೀವನಕ್ಕೆ ಆಧಾರ ಕಲ್ಪಿಸಬೇಕಿದೆ. ಒಂದು ಕೋಟಿ ಪರಿಹಾರ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆದರೆ ತಂದೆ ಮಗಳು ಸಾವನ್ನಪ್ಪಿರುವ ಕಾರಣಕ್ಕಾಗಿ ತಲಾ 10 ಲಕ್ಷ ರು ಪರಿಹಾರ ನೀಡುವುದಾಗಿ ಇಂಧನ ಸಚಿವ ಸುನೀಲ್ ಕುಮಾರ್ ವಿಧಾನ ಸಭೆಯಲ್ಲಿ ಪ್ರಕಟಿಸಿದರು.

Share This Article
Leave a comment